ನಟಿಯರ ಬಗ್ಗೆ ಅಶ್ಲೀಲ ಕಮೆಂಟ್: ನಟ ಕಮಲ್ ರಶೀದ್ ವಿರುದ್ಧ ಎಫ್ಐಆರ್

ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ರೂಪದರ್ಶಿ ಮತ್ತು ನಟಿಯರ ವಿರುದ್ಧ ಅಶ್ಲೀಲ ಸಂದೇಶ ಮತ್ತು ಫೋಟೋ ಹಾಕಿದ ಆರೋಪದ ಮೇಲೆ ನಟ ಕಮಲ್ ರಶೀದ್ ಖಾನ್...
ಕಮಲ್ ರಶೀದ್ ಖಾನ್
ಕಮಲ್ ರಶೀದ್ ಖಾನ್
Updated on: 

ಮುಂಬೈ: ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ರೂಪದರ್ಶಿ ಮತ್ತು ನಟಿಯರ ವಿರುದ್ಧ ಅಶ್ಲೀಲ ಸಂದೇಶ ಮತ್ತು ಫೋಟೋ ಹಾಕಿದ ಆರೋಪದ ಮೇಲೆ ನಟ ಕಮಲ್ ರಶೀದ್ ಖಾನ್ ವಿರುದ್ಧ ಮುಂಬ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಮುಂಬೈ ಮೂಲದ ವಕೀಲ ರಿಜ್ವಾನ್ ಸಿದ್ಧಿಕ್ ಎಂಬುವರು ಮುಂಬೈನ ವರ್ಸೋವಾ ಪೊಲೀಸ್ ಠಾಣೆಯಲ್ಲಿ ಕಳೆದ ಜೂನ್ 29ರಂದು ಕಮಲ್ ರಶೀದ್ ಖಾನ್ ತಮ್ಮ ಟ್ವೀಟರ್ ಪೇಜ್ ನಲ್ಲಿ ನಟಿಯರ ಬಗ್ಗೆ ಅಶ್ಲೀಲ ಸಂದೇಶಗಳನ್ನು ಹಾಕಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು. ಈ ದೂರಿನನ್ವಯ ಪೊಲೀಸರು ಒಂದು ತಿಂಗಳ ಬಳಿಕ ಕಮಲ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ರಿಜ್ವಾನ್ ಅವರು ಜೂನ್ 29ರಂದು ತಮ್ಮ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಕಮಲ್ ರಶೀದ್ ಖಾನ್ ಅವರ ಟ್ವೀಟರ್ ಗಮನಿಸಿದ್ದಾರೆ. ರಶೀದ್ ತಮ್ಮ ಟ್ವೀಟರ್ ನಲ್ಲಿ ನಟಿಯರ ಕುರಿತು ಅಶ್ಲೀಲ ಸಂದೇಶಗಳನ್ನು ಹಾಕಿರುವುದನ್ನು ಗಮನಿಸಿ ಕೂಡಲೇ ಫೋಟೋ ಹಾಗೂ ಸಂದೇಶವನ್ನು ಡೌನ್ ಲೋಡ್ ಮಾಡಿಕೊಂಡು ಠಾಣೆಗೆ ದೂರು ನೀಡಿದ್ದರು.

ಸಿದ್ಧಿಕ್ ಅವರ ಪ್ರಕಾರ, ಬಾಲಿವುಡ್ ತಾರೆಯರಾದ ಪರಿಣಿತಿ ಚೋಪ್ರಾ, ಕತ್ರಿನಾ ಕೈಫ್, ದೀಪಿಕ ಪಡುಕೋಣೆ, ಅಲಿಯಾ ಭಟ್, ಪ್ರಿಯಾಂಕ ಚೋಪ್ರಾ ಸೇರಿದಂತೆ ಹಲವು ನಟಿಯರ ವಿರುದ್ಧ ಅಶ್ಲೀಲ ಕಮೆಂಟ್ ಗಳನ್ನು ಮಾಡಿದ್ದರು ಎಂದು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಈ ವಿಭಾಗದ ಇತರ ಸುದ್ದಿ

No stories found.

X
Kannada Prabha
www.kannadaprabha.com