ಹೃತಿಕ್ 'ಕಾಬಿಲ್' ಮೊದಲ ನೋಟ ಬಿಡುಗಡೆ

ವಿವಾದಗಳಿಂದಲೇ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದ ಬಾಲಿವುಡ್ ಸೂಪರ್ ಸ್ಟಾರ್ ಹೃತಿಕ್ ರೋಶನ್ ಅಭಿಮಾನಿಗಳಿಗೆ ಸಂತಸ ತರುವ ಸುದ್ದಿಯಲ್ಲಿ ನಟನ ಮುಂದಿನ ಚಿತ್ರ 'ಕಾಬಿಲ್'
'ಕಾಬಿಲ್' ಸಿನೆಮಾದ ಮೊದಲ ನೋಟ
'ಕಾಬಿಲ್' ಸಿನೆಮಾದ ಮೊದಲ ನೋಟ

ಬೆಂಗಳೂರು: ವಿವಾದಗಳಿಂದಲೇ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದ ಬಾಲಿವುಡ್ ಸೂಪರ್ ಸ್ಟಾರ್ ಹೃತಿಕ್ ರೋಶನ್ ಅಭಿಮಾನಿಗಳಿಗೆ ಸಂತಸ ತರುವ ಸುದ್ದಿಯಲ್ಲಿ ನಟನ ಮುಂದಿನ ಚಿತ್ರ 'ಕಾಬಿಲ್' ಸಿನೆಮಾದ ಮೊದಲ ನೋಟ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಹೃತಿಕ್ ರೋಶನ್ ಎದುರು ಯಾಮಿ ಗೌತಮ್ ನಟಿಸುತ್ತಿದ್ದಾರೆ.

ಸಿನೆಮಾ ಮಾರುಕಟ್ಟೆ ತಜ್ಞ ತರಣ್ ಆದರ್ಶ್ 'ಕಾಬಿಲ್' ಸಿನೆಮಾದ ಪೋಸ್ಟರ್ ಅನ್ನು ಟ್ವೀಟ್  ಮಾಡಿದ್ದು, ಭಿತ್ತಿಚಿತ್ರದಲ್ಲಿ ಹೊಳೆಯುವ ಕಣ್ಣುಗಳುಳ್ಳ ಗ್ರೀಕ್ ದೇವರ ರೀತಿಯ ಹೃತಿಕ್ ಚಿತ್ರವನ್ನೊಳಗೊಂಡಿದೆ. "ಕಾಬಿಲ್ ನ ಮೊದಲ ನೋಟ. ೨೬ ಜನವರಿ ೨೦೧೭ಕ್ಕೆ ಬಿಡುಗಡೆ" ಎಂದು ಕೂಡ ಅವರು ಬರೆದಿದ್ದಾರೆ.

ಸಂಜಯ್ ಗುಪ್ತಾ ನಿರ್ದೇಶನದ 'ಕಾಬಿಲ್' ಸರಿ ಸುಮಾರು ಶಾರುಕ್ ಖಾನ್ ಅವರ 'ರಯೀಸ್' ಸಿನೆಮಾದ ಬಿಡುಗಡೆ ಸಮಯಕ್ಕೆ ಬರಲಿದ್ದು ಎರಡು ದೊಡ್ಡ ನಟರ ಸಿನೆಮಾಗಳು ಸೆಣಸಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com