ಬಾಲಿವುಡ್ ನಟ ನವಾಜುದ್ದೀನ್ ಸಿದ್ಧಿಖಿ ಯಾವ ಧರ್ಮ, ತಿಳಿಯಬೇಕೆ ಈ ವಿಡಿಯೋ ನೋಡಿ!

ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಖಿ ತಾವು ಎಲ್ಲ ಧರ್ಮಕ್ಕೂ ಸೇರಿದವನು ಅದಕ್ಕೂ ಮಿಗಿಲಾಗಿ ತಾವೊಬ್ಬ ಕಲಾವಿದ ಎಂಬ ಜಾತ್ಯಾತೀತೆಯ ಮಹತ್ವನ್ನು ಸಾರುವ...
ನವಾಜುದ್ದೀನ್ ಸಿದ್ಧಿಖಿ
ನವಾಜುದ್ದೀನ್ ಸಿದ್ಧಿಖಿ
ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಖಿ ತಾವು ಎಲ್ಲ ಧರ್ಮಕ್ಕೂ ಸೇರಿದವನು ಅದಕ್ಕೂ ಮಿಗಿಲಾಗಿ ತಾವೊಬ್ಬ ಕಲಾವಿದ ಎಂಬ ಜಾತ್ಯಾತೀತೆಯ ಮಹತ್ವನ್ನು ಸಾರುವ ವಿಡಿಯೊಂದನ್ನು ಬಿಡುಗಡೆ ಮಾಡಿದ್ದಾರೆ. 
ಧರ್ಮ, ಜಾತಿ, ಸಹಿಷ್ಣುತೆ ಮತ್ತು ಅಸಹಿಷ್ಣುತೆ ಕುರಿಂತಂತೆ ದೇಶದಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿದ್ದು ಈ ಮಧ್ಯೆ ನವಾಜುದ್ದೀನ್ ಸಿದ್ಧಿಖಿ ಅವರು ಅರ್ಥಪೂರ್ಣವಾದ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ವಿಡಿಯೋದಲ್ಲಿ ನಾನು ಡಿಎನ್ಎ ಪರೀಕ್ಷೆ ಮಾಡಿಕೊಂಡೆ. ಅದರಲ್ಲಿ ನನ್ನ ಧರ್ಮ ಯಾವುದೆಂದು ವರದಿ ತಿಳಿಸಿದೆ ಎನ್ನುತ್ತಾ ನವಾಜುದ್ದೀನ್ ಬೋರ್ಡ್ ಗಳ ಮೂಲಕ ಮಾಹಿತಿ ನೀಡಿದ್ದಾರೆ. 
ನವಾಜುದ್ದೀನ್ ಅವರು ವಿಡಿಯೋದಲ್ಲಿ ಬೋರ್ಡ್ ಗಳ ಮೂಲಕ ಶೇಕಡವಾರು ಪ್ರಮಾಣದಲ್ಲಿ ತಾವು ಧರ್ಮಕ್ಕೆ ಸೇರಿದವರು ಎಂದು ಹೇಳುತ್ತಾರೆ. ಕೊನೆಗೆ ತಾವೊರ್ವ ಕಲಾವಿದ ಅಷ್ಟೇ ಕಲೆಗೆ ಯಾವುದೇ ಜಾತಿ, ಧರ್ಮದ ಗೋಡೆಯಿಲ್ಲ. ಇಲ್ಲಿ ಕಲೆಗಷ್ಟೇ ಬೆಲೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com