ಸೈನಾ ನೆಹ್ವಾಲ್ ಜೀವನಾಧಾರಿತ ಚಿತ್ರದಲ್ಲಿ ಶ್ರದ್ಧಾ ಕಪೂರ್

ಇತ್ತೀಚೆಗೆ ಬಾಲಿವುಡ್ ನಲ್ಲಿ ಕ್ರೀಡಾ ಸಾಧಕರ ಜೀವನಾಧಾರಿತ ಚಿತ್ರಗಳು ತೆರೆಗೆ ಬರುತ್ತಿದ್ದು ಇದೀಗ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಜೀವನಾಧಾರಿತ...
ಸೈನಾ ನೆಹ್ವಾಲ್-ಶ್ರದ್ಧಾ ಕಪೂರ್
ಸೈನಾ ನೆಹ್ವಾಲ್-ಶ್ರದ್ಧಾ ಕಪೂರ್
Updated on
ಇತ್ತೀಚೆಗೆ ಬಾಲಿವುಡ್ ನಲ್ಲಿ ಕ್ರೀಡಾ ಸಾಧಕರ ಜೀವನಾಧಾರಿತ ಚಿತ್ರಗಳು ತೆರೆಗೆ ಬರುತ್ತಿದ್ದು ಇದೀಗ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಜೀವನಾಧಾರಿತ ಚಿತ್ರದಲ್ಲಿ ಬಾಲಿವುಡ್ ನಟಿ ಶದ್ಧಾ ಕಪೂರ್ ನಟಿಸಲಿದ್ದಾರೆ.
ಸೈನಾ ನೆಹ್ವಾಲ್ ಅವರ ಜೀವನಾಧಾರಿತ ಚಿತ್ರದಲ್ಲಿ ಅಭಿನಯಿಸಲು ಅವಕಾಶ ನೀಡಿದಕ್ಕೆ ಧನ್ಯವಾದಗಳು. ನೆಹ್ವಾಲ್ ಭಾರತೀಯಳಾಗಿದ್ದು ಲಕ್ಷಾಂತರ ಮಂದಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಶ್ರದ್ಧಾ ಕಪೂರ್ ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.
ಶ್ರದ್ಧಾ ಕಪೂರ್ ಭೂಗತ ದೊರೆ ದಾವೂದ್ ಇಬ್ರಾಹಿಂ ಸಹೋದರಿ ಹಸೀನಾ ಪಾರ್ಕರ್ ಜೀವನಾಧಾರಿತ ಚಿತ್ರದಲ್ಲಿ ನಟಿಸುತ್ತಿದ್ದು ಇದು ಸೈನಾ ನೆಹ್ವಾಲ್ ರ ಜೀವನಾಧಾರಿತ ಚಿತ್ರ ಅವರ ಎರಡನೇ ಚಿತ್ರವಾಗಲಿದೆ. 
ಚಿತ್ರಕ್ಕೆ ಸೈನಾ ಎಂದು ಹೆಸರಿಡಲಾಗಿದ್ದು, ಚಿತ್ರವನ್ನು ಅಮೋಲ್ ಗುಪ್ತೆ ನಿರ್ದೇಶಿಸಲಿದ್ದಾರೆ. 
ಬಾಗ್ ಮಿಲ್ಕಾ ಬಾಗ್ ಚಿತ್ರದ ನಂತರ ಕ್ರೀಡಾ ಸಾಧಕರ ಸರಣಿ ಚಿತ್ರಗಳು ತೆರೆಗೆ ಬರುತ್ತಿದ್ದು ಇತ್ತೀಚೆಗಷ್ಟೇ ಎಂಎಸ್ ಧೋನಿ ಅನ್ ಟೋಲ್ಟ್ ಸ್ಟೋರಿ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆದಿತ್ತು. ಇನ್ನು ಸಚಿನ್ ಕುರಿತ ಜೀವನಾಧಾರಿತ ಚಿತ್ರ ಸಚಿನ್ ಬಿಲಿಯನ್ ಡ್ರೀಮ್ಸ್ ಚಿತ್ರ ಇನ್ನು ತೆರೆ ಕಾಣಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com