ಮಧುರ್ ಭಂಡಾರ್ಕರ್ ಹತ್ಯೆಗೆ ಸಂಚು: ರೂಪದರ್ಶಿ ಪ್ರೀತಿ ಜೈನ್‌ಗೆ 3 ವರ್ಷ ಜೈಲು ಶಿಕ್ಷೆ

ಬಾಲಿವುಡ್ ನಿರ್ಮಾಪಕ-ನಿರ್ದೇಶಕ ಮಧುರ್ ಭಂಡಾರ್ಕರ್ ಹತ್ಯೆಗೆ ಸಂಚು ರೂಪಿಸಿದ್ದ ಆರೋಪ ಸಾಭೀತಾದ ಪರಿಣಾಮ ರೂಪದರ್ಶಿ ಪ್ರೀತಿ ಜೈನ್ ಅವರಿಗೆ...
ಮಧುರ್ ಭಂಡಾರ್ಕರ್, ಪ್ರೀತಿ ಜೈನ್
ಮಧುರ್ ಭಂಡಾರ್ಕರ್, ಪ್ರೀತಿ ಜೈನ್
ಮುಂಬೈ: ಬಾಲಿವುಡ್ ನಿರ್ಮಾಪಕ-ನಿರ್ದೇಶಕ ಮಧುರ್ ಭಂಡಾರ್ಕರ್ ಹತ್ಯೆಗೆ ಸಂಚು ರೂಪಿಸಿದ್ದ ಆರೋಪ ಸಾಭೀತಾದ ಪರಿಣಾಮ ರೂಪದರ್ಶಿ ಪ್ರೀತಿ ಜೈನ್ ಅವರಿಗೆ ನ್ಯಾಯಾಲಯ 3 ವರ್ಷ ಜೈಲು, 10 ಸಾವಿರ ದಂಡ ವಿಧಿಸಿದೆ. 
ಪ್ರೀತಿ ಜೈನ್ ಈ ಹಿಂದೆ ಮಧುರ್ ಭಂಡಾರ್ಕರ್ ವಿರುದ್ಧ ಅತ್ಯಾಚಾರ ದೂರನ್ನು ದಾಖಲಿಸಿದ್ದಳು. ಇನ್ನು ಭಂಡಾರ್ಕರ್ ಹತ್ಯೆ ಸಂಚಿನಲ್ಲಿ ಭಾಗಿಯಾಗಿದ್ದಕ್ಕಾಗಿ ಪ್ರೀತಿ ಜೈನ್ ಇಬ್ಬರು ಸಹವರ್ತಿಗಳಾದ ನರೇಶ್ ಪರ್ದೇಶಿ ಮತ್ತು ಶಿವರಾಮ್ ದಾಸ್ ಎಂಬುವರಿಗೂ ಮುಂಬೈನ ಸಿಟಿ ಸಿವಿಲ್ ಮತ್ತು ಸೆಶನ್ಸ್ ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ. 
ಪ್ರೀತಿ ಜೈನ್ ಮಧುರ್ ಭಂಡಾರ್ ಕರ್ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿದ ವರ್ಷದ ನಂತರ ಪರ್ದೇಶಿಯನ್ನು ಸಂಪರ್ಕಿಸಿ ಭಂಡಾರ್ ಕರ್ ಹತ್ಯೆಗಾಗಿ 75 ಸಾವಿರ ನೀಡಿದ್ದಳು. ಆದರೆ ಪರ್ದೇಶಿ ಭಂಡಾರ್ ಕರ್ ಹತ್ಯೆ ಮಾಡದಿದ್ದಕ್ಕಾಗಿ ಆತನಿಗೆ ತಾನು ಕೊಟ್ಟಿದ್ದ 75 ಸಾವಿರ ರುಪಾಯಿ ವಾಪಸ್ ನೀಡುವಂತೆ ಕೇಳಿದ್ದಳು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com