ಬಾಲಿವುಡ್

25 ವರ್ಷಗಳ ನಂತರ ಮೊದಲ ಬಾರಿಗೆ ಸೆಲ್ಫಿಗೆ ಪೋಸ್ ನೀಡಿದ ಖಾನ್ ದ್ವಯರು!

ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಮತ್ತು ಮಿ. ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಸತತ ಎರಡು ದಶಕಗಳ ನಂತರ ಮೊದಲ ಬಾರಿಗೆ ಜೊತೆಯಾಗಿ ಕ್ಯಾಮೆರಾಗೆ ...

25 ವರ್ಷಗಳ ನಂತರ ಮೊದಲ ಬಾರಿಗೆ ಸೆಲ್ಫಿಗೆ ಪೋಸ್ ನೀಡಿದ  ಖಾನ್ ದ್ವಯರು!
ಶಾರೂಖ್ ಖಾನ್ ಮತ್ತು ಆಮೀರ್ ಖಾನ್
Published On :

ನವದೆಹಲಿ: ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಮತ್ತು ಮಿ. ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಸತತ ಎರಡು ದಶಕಗಳ ನಂತರ  ಮೊದಲ ಬಾರಿಗೆ ಜೊತೆಯಾಗಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.

ಅಮೀರ್ ಖಾನ್ ಅವರ ಜೊತೆಗಿನ ಕೂಲ್ ಸೆಲ್ಫೀಯನ್ನು ಶಾರೂಖ್ ಖಾನ್ ಟ್ವಿಟ್ಟರ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಶಾರೂಖ್ ಖಾನ್ ಅವರ ಈ ಪೋಸ್ಟ್ ಗೆ ಈಗಾಗಲೇ 25 ಸಾವಿರ ಲೈಕ್ ಗಳು ಬಂದಿವೆ.

ಪ್ರತಿಬಾರಿ ಭೇಟಿಯಾದಾಗಲೂ ಶಾರೂಖ್ ಮತ್ತು ಸಲ್ಮಾನ್ ಒಟ್ಟಿಗೆ ಫೋಟೋ ಕ್ಲಿಕ್ ಮಾಡುತ್ತಿದ್ದರು. ಆದರೆ ಈ ಬಾರಿ ವಿಶೇಷ ಎನ್ನುವಂತೆ ಶಾರೂಖ್ ಮತ್ತು ಅಮೀರ್ ಜೊತೆಯಾಗಿ ಸೆಲ್ಫೀ ಕ್ಲಿಕ್ಕಿಸಿಕೊಂಡಿದ್ದಾರೆ. 25 ವರ್ಷಗಳಿಂದ ನಮ್ಮಿಬ್ಬರ ಪರಿಚಯವಿದೆ, ಆದರ ಈ ಫೋಟೋ ನಾವಿಬ್ಬರು ಒಟ್ಟಾಗಿ ನಮಗಾಗಿ ತೆಗೆದುಕೊಂಡದ್ದಾಗಿದೆ ಎಂದು  ಶಾರೂಖ್ ಟ್ವೀಟ್ ಮಾಡಿದ್ದಾರೆ.

ಅಜಯ್ ಬಿಜಿ ಹುಟ್ಟು ಹಬ್ಬ ಸಮಾರಂಭದಲ್ಲಿ ಸೇರಿದ್ದ ಈ ಇಬ್ಬರು ಅಲ್ಲಿಯೇ ಫೋಟೋ ಕ್ಲಿಕ್ಕಿಸಿಕೊಂಡಿದ್ದರು ಎಂದು ವರದಿಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.