ಇಂದು ಪ್ರಿಯಾಂಕಾ-ನಿಕ್ ಎಂಗೇಜ್ ಮೆಂಟ್ ಪಾರ್ಟಿ: ಇಲ್ಲಿದೆ ಫುಲ್ ಡಿಟೇಲ್!

ಬಾಲಿವುಡ್ ಹಾಟ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಹಾಲಿವುಡ್‌ ಗಾಯಕ ನಿಕ್‌ ಜೋನಸ್‌ ಜೋಡಿ ಕೆಲವು ದಿನಗಳಿಂದ ಜಾಗತಿಕ ಮಾದ್ಯಮಗಳಿಗೆ ಹಾಟ್ ಫೆವರಿಟ್ ಆಗಿತ್ತು.
ಇಂದು ಪ್ರಿಯಾಂಕಾ-ನಿಕ್ ಎಂಗೇಜ್ ಮೆಂಟ್ ಪಾರ್ಟಿ: ಇಲ್ಲಿದೆ ಫುಲ್ ಡಿಟೇಲ್!
ಇಂದು ಪ್ರಿಯಾಂಕಾ-ನಿಕ್ ಎಂಗೇಜ್ ಮೆಂಟ್ ಪಾರ್ಟಿ: ಇಲ್ಲಿದೆ ಫುಲ್ ಡಿಟೇಲ್!
ಮುಂಬೈ: ಬಾಲಿವುಡ್ ಹಾಟ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಹಾಲಿವುಡ್‌ ಗಾಯಕ ನಿಕ್‌ ಜೋನಸ್‌ ಜೋಡಿ ಕೆಲವು ದಿನಗಳಿಂದ ಜಾಗತಿಕ ಮಾದ್ಯಮಗಳಿಗೆ ಹಾಟ್ ಫೆವರಿಟ್ ಆಗಿತ್ತು. ವಿಷಯವೇನೆಂದರೆ ಪ್ರಿಯಾಂಕಾ ಹಾಗೂ ನಿಕ್ ಇದಾಗಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದು ನಿಕ್ ಕುಟುಂಬ ಶುಕ್ರವಾರ ಭಾರತಕ್ಕೆ ಆಗಮಿಸಿದೆ.
ಮುಂಬೈಗೆ ಬಂದಿರುವ ನಿಕ್‌ ತಂದೆ ಪೌಲ್‌ ಕೇವಿನ್‌ ಜೋನಸ್‌ ಮತ್ತು ತಾಯಿ ಡೆನಿಸ್‌ ಮಿಲ್ಲರ್‌ ಅವರಿಗೆ ಪ್ರಿಯಾಂಕಾ ಚೋಪ್ರಾ ಕುಟುಂಬ ಆದರದ ಸ್ವಾಗತ ನೀಡಿದೆ. 
ಶನಿವಾರ ಸಂಜೆ ಭಾರತೀಯ ಚಲನಚಿತ್ರ ರಂಗದ ಸ್ನೇಹಿತರಿಗೆ ಹಾಗೂ ಕುಟುಂಬದ ಆಪ್ತ ಸಂಬಂಧಿಕರಿಗೆ ಪ್ರಿಯಾಂಕಾ ಮತ್ತು ನಿಕ್ ಕುಟುಂಬ ವಿಶೇಷ ಔತಣಕೂಟ ಏರ್ಪಡಿಸಿದೆ. ಈ ಮೂಲಕ ಪ್ರಿಯಾಂಕಾ-ನಿಕ್ ನಿಶ್ಚಿತಾರ್ಥವನ್ನು ಅಧಿಕೃತವಾಗಿ ಘೋಷಿಸಲಿದೆ. ಇಂದು ಸಂಜೆ 5 ಸ್ಟಾರ್ ಹೋಟೆಲ್ ನಲ್ಲಿ ನಿಶ್ಚಿತಾರ್ಥದ ಸಂಬಂಧ ಔತಣಕೂಟ ಏರ್ಪಾಟಾಗಿದೆ.
ಇದಕ್ಕೂ ಮುನ್ನ ಬುಧವಾರ ರಾತ್ರಿ ಪ್ರಿಯಾಂಕಾ ಅವರ ಮನೆಗೆ ಆಗಮಿಸಿದ್ದ ಒಬ್ಬ ಪುರೋಹಿತರು ಹಿಂದೂ ಧಾರ್ಮಿಕ ಆಚರಣೆಗಳ ಪ್ರಕಾರ ಪ್ರಿಯಾಂಕಾ ನಿಶ್ಚಿತಾರ್ಥವನ್ನು ನೆರವೇರಿಸಿದ್ದಾರೆ ಎನ್ನ;ಲಾಗಿದೆ.
ರೋಕಾ ಸಮಾರಂಭ
ಪ್ರಿಯಾಂಕಾ ಮನೆಯಲ್ಲಿ ಇಂದು ಬೆಳಿಗ್ಗೆ 10 ಗಂಟೆಗೆ, ಪೂಜಾ ಕಾರ್ಯಕ್ರಮ ನಡೆಯಲಿದೆ. ಪ್ರಿಯಾಂಕಾ-ನಿಕ್ ಜೋಡಿಯು ಸಾಂಪ್ರದಾಯಿಕ ಉಡುಗೆ ತೊಟ್ಟು ಈ ಪೂಜೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ಹೇಳಿದೆ.
ರೋಕಾ ಸಮಾರಂಭದ ನಂತರ ಭೋಜನ ಇರಲಿದ್ದು ಮೆನುವಿನಲ್ಲಿ ಪಂಜಾಬಿ ತಿನಿಸುಗಳಿಗೆ ಪ್ರಾಧಾನ್ಯ ನೀಡಲಾಗಿದೆ. ನಿಕ್ ಪಂಜಾಬಿ ತಿನಿಸು ಪ್ರಿಯರೆಂದು ಕಾರಣಕ್ಕಾಗಿ ಈ ತಿನಿಸುಗಳನ್ನು ಮೆನುವಿನಲ್ಲಿ ಸೇರಿಸಲಾಗಿದೆ ಎಂದು ಹೇಳಿದ್ದಾರೆ.
ಸಂಜೆ ಔತಣಕೂಟ
ನಿಕ್ ಈ ಮುನ್ನ ದಾಲ್ ಮಕ್ರಿ, ಮತ್ತು ಬಟರ್ ಚಿಕನ್ ಅನ್ನು ಸವಿದಿದ್ದು ಇದೀಗ ಆತ ತನ್ನ ಕುಟುಂಬಕ್ಕೆ ಈ ತಿನಿಸಿನ ರುಚಿಯನ್ನು ತೋರಿಸ ಬಯಸಿದ್ದಾರೆ. ಇದಕ್ಕಾಗಿ ಇಂದು ಸಂಜೆ ಔತಣ ಕುಟದಲ್ಲಿ ಈ ತಿನಿಸುಗಳ ಸೇರ್ಪಡೆಯಾಗಿದೆ.ಸಂಜೆ ಪಾರ್ಟಿಯಲ್ಲಿ ಪ್ರಿಯಾಂಕಾ ಗೌನ್ ಧರಿಸಲಿದ್ದಾರೆ. ಅವರು ತಮ್ಮ ನಿಶ್ಚಿತಾರ್ಥವನ್ನು ಅಧಿಕೃತವಾಗಿ ಘೋಷಿಸಲಿದ್ದಾರೆ.
ಈ ಕಾರ್ಯಕ್ರಮವನ್ನು ಖಾಸಗಿಯಾಗಿ ನಡೆಸಲು ಪ್ರಿಯಾಂಕಾ-ನಿಕ್ ಬಯಸಿದ್ದು ಸಮಾರಂಭದ ಯಾವ ಫೋಟೋಗಳನ್ನು ಹಂಚಿಕೊಳ್ಳಲು ದಂಪತಿಗಳು ನಿರಾಕರಿಸಿದ್ದಾರೆ. ಸೆಪ್ಟೆಂಬರ್ 16 ನಿಕ್ ಜನ್ಮದಿನವಾಗಿದ್ದು ಅದೇ ಸಮಯದಲ್ಲಿ ಈ ಜೋಡಿ ಹಸೆಮಣೆ ಏರುವ ಸಾಧ್ಯತೆ ಇದೆ.
"ನನ್ನ ಸಂಪೂರ್ಣ ಜೀವನ, ವಿಶೇಷವಾಗಿ ನನ್ನ ವೈಯಕ್ತಿಕ ಜೀವನ, ಸಾರ್ವಜನಿಕ ಬಳಕೆಗೆ ಅಲ್ಲ, ನನ್ನ ಜೀವನದ 90 ಪ್ರತಿಶತವು ಸಾರ್ವಜನಿಕ ಬಳಕೆಗಾಗಿ, ಆದರೆ 10 ಪ್ರತಿಶತ ನನ್ನ ಖಾಸಗಿಯಾದದ್ದು ನಾನು ಒಬ್ಬ ಹುಡುಗಿಯಾಗಿದ್ದೇನೆ ಮತ್ತು ನನ್ನದೇ  ಜೀವನ ನಡೆಸುವ ಹಕ್ಕು ನಾನು ಹೊಂದಿದ್ದೇನೆ" ಇತ್ತೀಚೆ ಸಮಾರಂಭವೊಂದರಲ್ಲಿ ಪಪ್ರಿಯಾಂಕಾ ತಾವು ನಿಶ್ಚಿತಾರ್ಥದ ಕುರಿತ ಪ್ರಶ್ನೆಗೆ ಹೀಗೆ ಖಾರವಾಗಿ ಉತ್ತರಿಸಿದ್ದರು. ಅಲ್ಲದೆ ಅವರು ತಮ್ಮ ಎಂಗೇಜ್‌ಮೆಂಟ್‌ ಉಂಗುರವನ್ನು ಕ್ಯಾಮರಾ ಕಣ್ಣುಗಳಿಂದ ಮುಚ್ಚಿಡಲು  ಬಯಸಿದ್ದರು.
ಬಾಲಿವುಡ್ ನಿರ್ದೇಶಕ ಅಲಿ ಅಬ್ಬಾಸ್‌ ಜಫರ್‌ ಅವರು ಪ್ರಿಯಾಂಕಾ ತಮ್ಮ ಚಿತ್ರ 'ಭಾರತ್‌'ನಿಂದ ಹೊರಹೋಗಿದ್ದು ಅವರಿಗೆ ಇದು ವಿಶೇಷವಾದ 'ನಿಖಾ' ಸಮಯ ಎಂದು ಟ್ವೀಟ್ ಮಾಡಿ ನಟಿಯು ನಿಶ್ಚಿತಾರ್ಥವಾಗಿರುವುದರ ಸುಳಿವು ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com