ಮುಂಬೈ: ಜಾಗತಿಕ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೆ ಹೊರದೇಶಗಳಲ್ಲಿ ಕೂಡ ಅಭಿಮಾನಿಗಳಿರುವುದು ಗೊತ್ತೇ ಇದೆ. ಇದೀಗ ಬಾಂಗ್ಲಾದೇಶದಲ್ಲಿ ದೀಪಿಕಾ ಅಭಿಮಾನಿಗಳು ಅವರ ಹೆಸರಿನಲ್ಲಿ ಬಾವಿ ನಿರ್ಮಿಸಿ ಸುದ್ದಿಯಾಗಿದ್ದಾರೆ.
ಪದ್ಮಾವತಿ ನಟಿ ದೀಪಿಕಾ ಇತ್ತೀಚೆಗಷ್ಟೆ ಶ್ರೀಲಂಕಾಕ್ಕೆ ಹೋಗಿ ತಮ್ಮ 32ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಅವರ ಅಭಿಮಾನಿಗಳಲ್ಲೊಬ್ಬರಾದ ಅರಬ್ ಫ್ಯಾನ್ ಕ್ಲಬ್ಸ್ ನ ಸದಸ್ಯರು ಹಣ ಸಂಗ್ರಹಿಸಿ ಬಾಂಗ್ಲಾದೇಶದ ಬರಪೀಡಿತ ಗ್ರಾಮವಾದ ರಾಧಾನಗರದಲ್ಲಿ ಬಾವಿ ತೋಡಿಸಿ ಜನರಿಗೆ ನೀರು ಒದಗಿಸಿದ್ದಾರೆ. ಅಲ್ಲದೆ ಬಾವಿಯ ಪಕ್ಕ ಫಲಕವೊಂದರಲ್ಲಿ ಬಾಜಿರಾವ್ ಮಸ್ತಾನಿ ನಟಿಗೆ ಇದು ಅದ್ಭುತ ಕೊಡುಗೆ ಎಂದು ಬರೆಸಿದ್ದಾರೆ.
ಇದಕ್ಕೆ ನಟಿ ದೀಪಿಕಾ ಕೂಡ ಖುಷಿಯಾಗಿದ್ದಾರೆ. ನೀವು ತೋರಿಸುತ್ತಿರುವ ಪ್ರೀತಿ, ವಿಶ್ವಾಸಗಳಿಗೆ ಚಿರಋಣಿಯಾಗಿದ್ದೇನೆ. ನನ್ನ ಹುಟ್ಟುಹಬ್ಬಕ್ಕೆ ಸಿಕ್ಕಿರುವ ಅಮೂಲ್ಯ ಕೊಡುಗೆಯಿದು ಎಂದು ಟ್ವೀಟ್ ಮಾಡಿದ್ದಾರೆ.
ಇನ್ನೊಂದೆಡೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಮತ್ತು ಶಾಹಿದ್ ಕಪೂರ್ ಅಭಿನಯದ ಪದ್ಮಾವತ್ ಚಿತ್ರಕ್ಕೆ ವಿರೋಧ ಕೇಳಿಬರುತ್ತಲೇ ಇದೆ. ಚಿತ್ರದಲ್ಲಿ ಇತಿಹಾಸದ ವಿಷಯಗಳನ್ನು ತಿರುಚಲಾಗಿದೆ ಎಂದು ರಜಪೂತ ಕರ್ಣಿ ಸೇನಾದ ಸದಸ್ಯರು ಆರೋಪಿಸುತ್ತಿದ್ದಾರೆ.
it fills my heart to see your generosity & contribution in making this world a better & happier place.This is the best birthday gift I could’ve asked for.I love you & I’m so proud of you all. https://t.co/kQYZiDMGEZ