ಸನ್ನಿ ಲಿಯೋನ್-ನಿಶಾ
ಸನ್ನಿ ಲಿಯೋನ್-ನಿಶಾ

ನೀನೆ ನನ್ನ ಜೀವನದ ಹೊಸ ಬೆಳಕು; ಸನ್ನಿ ಲಿಯೋನ್ ಪೋಸ್ಟ್‌ಗೆ ನೆಟಿಗರು ಫಿದಾ!

ಮಾಜಿ ನೀಲಿ ಚಿತ್ರ ತಾರೆ, ಬಾಲಿವುಡ್ ನ ನಟಿ ಸನ್ನಿ ಲಿಯೋನ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಫೋಟೋ ಹಾಕಿ ನೀನು ನನ್ನ ಜೀವನದ ಹೊಸ ಬೆಳಕು ಎಂದು ಬರೆದುಕೊಂಡಿದ್ದು...
ಮಾಜಿ ನೀಲಿ ಚಿತ್ರ ತಾರೆ, ಬಾಲಿವುಡ್ ನ ನಟಿ ಸನ್ನಿ ಲಿಯೋನ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಫೋಟೋ ಹಾಕಿ ನೀನು ನನ್ನ ಜೀವನದ ಹೊಸ ಬೆಳಕು ಎಂದು ಬರೆದುಕೊಂಡಿದ್ದು ಈ ಫೋಟೋ ಇದೀಗ ನೆಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. 
ಮಹಾರಾಷ್ಟ್ರದ ಲಾತೂರಿನಲ್ಲಿ ನಿಶಾಳೊಂದಿಗೆ ಸನ್ನಿ ಲಿಯೋನ್ ತಮ್ಮ ತಾಯ್ತನ ಹಂಚಿಕೊಳ್ಳುತ್ತಿದ್ದಾರೆ. ಈ ಮಧ್ಯೆ ನಿಶಾ ಜೊತೆಗಿನ ಫೋಟೋ ಹಾಕಿ ಸನ್ನಿ, ನೀನೆ ನನ್ನ ಜೀವನದ ಹೊಸ ಬೆಳಕು, ನಿನಗೆ ಮೂರನೇ ವರ್ಷದ ಹುಟ್ಟುಹಬ್ಬದ ಶುಭಾಶಯ ಎಂದು ಬರೆದುಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. 
ಇನ್ನು ಸನ್ನಿ ಲಿಯೋನ್ ಮತ್ತು ಡೇನಿಯಲ್ ವೇಬರ್ ದಂಪತಿ ಒಂದು ವರ್ಷದ ಅವಧಿಯಲ್ಲಿ ಒಂದು ಹೆಣ್ಣು ಮಗು ಮತ್ತಿಬ್ಬರು ಅವಳಿ ಮಕ್ಕಳನ್ನು ದತ್ತು ಪಡೆದು ಸುಖ ಸಂಸಾರ ನಡೆಸುತ್ತಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com