ರಾನು ಮೊಂಡಲ್ ವರ್ತನೆ ಕಂಡು ಮತ್ತೆ ಆಕ್ರೋಶಗೊಂಡ ನೆಟಿಗರು, ವಿಡಿಯೋ ವೈರಲ್!

ಖ್ಯಾತಿ ಗಳಿಸಿದ ಕೂಡಲೇ ಕೆಲವರು ತಮ್ಮ ವರ್ತನೆಯನ್ನೇ ಬದಲಾಯಿಸಿಕೊಳ್ಳುತ್ತಾರೆ. ಅದೇ ರೀತಿ ಮುಂಬೈನ ಬೀದಿಗಳಲ್ಲಿ ಹಾಡಿ ಭಿಕ್ಷೆ ಬೇಡುತ್ತಿದ್ದ ರಾನು ಮೊಂಡಲ್ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗುತ್ತಿದ್ದಂತೆ ಸೆಲ್ಫಿ ತೆಗೆಸಿಕೊಳ್ಳಲು...
ರಾನು ಮೊಂಡಲ್
ರಾನು ಮೊಂಡಲ್
Updated on

ಮುಂಬೈ: ಖ್ಯಾತಿ ಗಳಿಸಿದ ಕೂಡಲೇ ಕೆಲವರು ತಮ್ಮ ವರ್ತನೆಯನ್ನೇ ಬದಲಾಯಿಸಿಕೊಳ್ಳುತ್ತಾರೆ. ಅದೇ ರೀತಿ ಮುಂಬೈನ ಬೀದಿಗಳಲ್ಲಿ ಹಾಡಿ ಭಿಕ್ಷೆ ಬೇಡುತ್ತಿದ್ದ ರಾನು ಮೊಂಡಲ್ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗುತ್ತಿದ್ದಂತೆ ಸೆಲ್ಫಿ ತೆಗೆಸಿಕೊಳ್ಳಲು ಬಂದ ಅಭಿಮಾನಿಗೆ ಡೋಂಟ್ ಟಚ್ ಮಿ ಎಂದು ಹೇಳಿ ಸುದ್ದಿಯಾಗಿದ್ದರು. ಇದೀಗ ಪತ್ರಕರ್ತರ ಪ್ರಶ್ನೆಯನ್ನು ಲೆಕ್ಕಿಸದ ಸುಮ್ಮನೆ ನಿಂತು ಸುದ್ದಿಯಾಗಿದ್ದಾರೆ. 

ರಾನು ಮೊಂಡಲ್ ಅವರನ್ನು ಪತ್ರಕರ್ತರು ಪ್ರಶ್ನೆಗಳನ್ನು ಕೇಳಲು ಮುಂದಾಗುತ್ತಾರೆ. ಈ ವೇಳೆ ರಾನು ವರ್ತನೆ ನೋಡಿ ನೆಟಿಗರು ಗರಂ ಆಗಿದ್ದಾರೆ. ತಿಂಡಿ ತಿನ್ನುವ ಮೂಲಕ ಪತ್ರಕರ್ತರ ಪ್ರಶ್ನೆಗಳನ್ನು ರಾನು ನಿರ್ಲಕ್ಷಿಸಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದ್ದು ನೆಟಿಗರು ರಾನುರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪತ್ರಕರ್ತರೊಬ್ಬರು ನಿಮಗೆ ಇಷ್ಟು ದೊಡ್ಡ ಯಶಸ್ಸು ಸಿಕ್ಕಿದೆ. ನಿಮಗೆ ಹೇಗೆ ಅನಿಸುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಆಗ ರಾನು ಬ್ಯಾಗಿನಿಂದ ತಿಂಡಿಯನ್ನು ತೆಗೆದುಕೊಂಡು ತಿನ್ನುತ್ತಾ ಆಕೆ ಈ ಕಡೆ ನೋಡಿ ನಿಮ್ಮ ಪ್ರಶ್ನೆ ನನಗೆ ಕೇಳಿಸಲಿಲ್ಲ ಎಂದು ಹೇಳುತ್ತಾರೆ. 

ರಾನುರ ಈ ವರ್ತನೆ ವಿರುದ್ಧ ನೆಟಿಗರು ಆಕ್ರೋಶಕೊಂಡಿದ್ದು ಟ್ವೀಟ್ ಮಾಡುವ ಮೂಲಕ ಟ್ರೋಲ್ ಮಾಡುತ್ತಿದ್ದಾರೆ. 

 
 
 
 
 
 
 
 
 
 
 
 
 

Kya se kya hogaye dekhte dekhte #ranumondal

A post shared by Our Vadodara (@clickers_of_vadodara) on

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com