ಬಾಲಿವುಡ್ ಡ್ರಗ್ಸ್ ಕೇಸ್: ಹಾಸ್ಯನಟಿ ಭಾರ್ತಿ ಸಿಂಗ್ ದಂಪತಿಗೆ 14 ದಿನ ನ್ಯಾಯಾಂಗ ಬಂಧನ

ಮಾದಕ ವಸ್ತು ಸಂಗ್ರಹಣೆ ಮತ್ತು ಸೇವನೆ ಆರೋಪದ ಮೇಲೆ ಬಂಧಿತರಾಗಿರುವ ಹಾಸ್ಯನಟಿ ಭಾರ್ತಿ ಸಿಂಗ್ ಹಾಗೂ ಪತಿ ಹರ್ಷ್ ಲಿಂಬಾಚಿಯಾ ಅವರಿಗೆ ಡಿಸೆಂಬರ್ 4 ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಮುಂಬೈನ ನ್ಯಾಯಾಲಯ ಆದೇಶಿಸಿದೆ.
ಭಾರ್ತಿ ಸಿಂಗ್
ಭಾರ್ತಿ ಸಿಂಗ್
Updated on: 

ಮುಂಬೈ: ಮಾದಕ ವಸ್ತು ಸಂಗ್ರಹಣೆ ಮತ್ತು ಸೇವನೆ ಆರೋಪದ ಮೇಲೆ ಬಂಧಿತರಾಗಿರುವ ಹಾಸ್ಯನಟಿ ಭಾರ್ತಿ ಸಿಂಗ್ ಹಾಗೂ ಪತಿ ಹರ್ಷ್ ಲಿಂಬಾಚಿಯಾ ಅವರಿಗೆ ಡಿಸೆಂಬರ್ 4 ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಮುಂಬೈನ ನ್ಯಾಯಾಲಯ ಆದೇಶಿಸಿದೆ.

ಈ ದಂಪತಿಗಳನ್ನು ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಬಂಧಿಸಿದೆ. ಭಾರ್ತಿ ಸಿಂಗ್ ಅವರನ್ನು ಶನಿವಾರ ಬಂಧಿಸಲಾಗಿದ್ದು 12 ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಪತಿ ಹರ್ಷ್  ಅವರನ್ನೂ ಬಂಧಿಸಲಾಗಿದೆ.

ಶನಿವಾರ ಅವರ ನಿವಾಸದ ಮೇಲೆ ದಾಳಿ ನಡೆಸಿದ ಸಮಯದಲ್ಲಿ ಗಾಂಜಾ ಇರುವುದು ಪತ್ತೆಯಾಗಿತ್ತು.ಭಾರ್ತಿ ಸಿಂಗ್ ಹಾಗೂ ಅವರ ಪತಿ ತಾವು ಗಾಂಜಾ ಸೇವನೆ ಮಾಡುವುದಾಗಿ ಒಪ್ಪಿಕೊಂಡಿದ್ದಾರೆಂದು ವರದಿಯಾಗಿದೆ.

ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ (ಎನ್‌ಡಿಪಿಎಸ್) ಕಾಯ್ದೆಯಡಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com