ಕೊರೋನಾ ಗೆದ್ದ ಬಾಲಿವುಡ್ ಹಿರಿಯ ನಟ ರಣಧೀರ್ ಕಪೂರ್

ಬಾಲಿವುಡ್ ತಾರಾ ನಾಯಕಿಯರಾದ ಕರೀನಾ ಕಪೂರ್ , ಕರಿಷ್ಮಾ ಕಪೂರ್ ತಂದೆ ನಟ ರಣಧೀರ್ ಕಪೂರ್ (74) ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ.
ಬಾಲಿವುಡ್ ಹಿರಿಯ ನಟ ರಣಧೀರ್ ಕಪೂರ್
ಬಾಲಿವುಡ್ ಹಿರಿಯ ನಟ ರಣಧೀರ್ ಕಪೂರ್
Updated on: 

ಮುಂಬೈ: ಬಾಲಿವುಡ್ ತಾರಾ ನಾಯಕಿಯರಾದ ಕರೀನಾ ಕಪೂರ್, ಕರಿಷ್ಮಾ ಕಪೂರ್ ತಂದೆ ನಟ ರಣಧೀರ್ ಕಪೂರ್ (74) ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ.

ಕಳೆದ ತಿಂಗಳು ಏಪ್ರಿಲ್ 29 ರಂದು ಕೊರೊನಾ ಸೋಂಕಿಗೊಳಗಾಗಿ ಮುಂಬೈನ ಕೋಕಿಲಾ ಬೆನ್ ಅಂಬಾನಿ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ, ತೀವ್ರ ಉಸಿರಾಟ ಸಮಸ್ಯೆಯ ಕಾರಣ ಅವರನ್ನು ಐಸಿಯುನಲ್ಲಿರಿಸಿ ಚಿಕಿತ್ಸೆ ಕಲ್ಪಿಸಲಾಗಿತ್ತು. . ಕೊವಿಡ್‌ ನಿರೋಧಕ ಲಸಿಕೆಯ ಎರಡನೇ ಡೋಸ್‌ ತೆಗೆದುಕೊಂಡ ನಂತರ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು.

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ರಣಧೀರ್ ಕಪೂರ್ ಈಗ ತಮ್ಮ ಆರೋಗ್ಯ ತುಂಬಾ ಚೆನ್ನಾಗಿದೆ ಎಂದು ಹೇಳಿದ್ದಾರೆ. ಆದರೆ ಮನೆಯಲ್ಲಿಯೇ ಇನ್ನೂ ಕೆಲ ದಿನಗಳ ಕಾಲ ಕ್ವಾರಂಟೈನ್‌ನಲ್ಲಿರಬೇಕು ಎಂದು ವೈದ್ಯರು ಸೂಚಿಸಿದ್ದಾರೆ. ಇನ್ನೂ ತಮಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ಕಲ್ಪಿಸಿದ ಆಸ್ಪತ್ರೆ ಸಿಬ್ಬಂದಿಗೆ ರಣಧೀರ್‌ಕಪೂರ್‌ ವಿಶೇಷ ಧನ್ಯವಾದ ಸಲ್ಲಿಸಿದ್ದಾರೆ. ಅವರು( ಅಸ್ಪತ್ರೆ ಸಿಬ್ಬಂದಿ) ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಂಡರು ಎಂದು ಹೇಳಿದ್ದಾರೆ. ರಣಧೀರ್ ಕಪೂರ್ ಮನೆಗೆ ತಲುಪುತಿದ್ದಂತೆಯೇ ಕಪೂರ್ ಕುಟುಂಬದ ಸಂತಸ ಮನೆ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com