'ಟೈಗರ್ 3' ಸಕ್ಸಸ್ ಮೀಟ್: ಕಿಸ್ಸಿಂಗ್ ಸ್ಟಾರ್ ಇಮ್ರಾನ್ ಹಶ್ಮಿಗೆ ಸಲ್ಮಾನ್ ಖಾನ್ 'ಕಿಸ್ಸಿಂಗ್' ವಿಡಿಯೋ ವೈರಲ್

ಇತ್ತೀಚೆಗಷ್ಟೇ ಬಿಡುಗಡೆಯಾದ ತಮ್ಮ ಆಕ್ಷನ್ ಥ್ರಿಲ್ಲರ್ ಚಿತ್ರ 'ಟೈಗರ್ 3' ಯಶಸ್ಸಿನ ಸಂಭ್ರಮದಲ್ಲಿರುವ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಸಹ-ನಟ ಇಮ್ರಾನ್ ಹಶ್ಮಿಗೆ 'ಕಿಸ್ಸಿಂಗ್' ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ಸಲ್ಮಾನ್ ಖಾನ್ ಕಿಸ್ಸಿಂಗ್ ದೃಶ್ಯ
ಸಲ್ಮಾನ್ ಖಾನ್ ಕಿಸ್ಸಿಂಗ್ ದೃಶ್ಯ
Updated on

ಮುಂಬೈ: ಇತ್ತೀಚೆಗಷ್ಟೇ ಬಿಡುಗಡೆಯಾದ ತಮ್ಮ ಆಕ್ಷನ್ ಥ್ರಿಲ್ಲರ್ ಚಿತ್ರ 'ಟೈಗರ್ 3' ಯಶಸ್ಸಿನ ಸಂಭ್ರಮದಲ್ಲಿರುವ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಸಹ-ನಟ ಇಮ್ರಾನ್ ಹಶ್ಮಿಗೆ 'ಕಿಸ್ಸಿಂಗ್' ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

ಟೈಗರ್ 3' ನಿರ್ಮಾಪಕರು ಶುಕ್ರವಾರ ಆಯೋಜಿಸಿದ್ದ ಚಿತ್ರದ ಸಕ್ಸಸ್ ಮೀಟ್ ನಲ್ಲಿ  ಕತ್ರಿನಾ ಕೈಫ್ ಸಮ್ಮುಖದಲ್ಲಿ ಕಿಸ್ಸಿಂಗ್ ಸ್ಟಾರ್ ಇಮ್ರಾನ್ ಹಶ್ಮಿಗೆ ಸಲ್ಮಾನ್ ಖಾನ್ ಕಿಸ್ ಕೊಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಈವೆಂಟ್‌ನಲ್ಲಿ ಸೆಲೆಬ್ರಿಟಿಗಳು, ಅಭಿಮಾನಿಗಳೊಂದಿಗೆ ಸಂವಾದ ನಡೆಸಿದ ಸಲ್ಮಾನ್ ಖಾನ್, ಇಮ್ರಾನ್‌ ಹಶ್ಮಿಗೆ ಮುತ್ತಿಟ್ಟು ಪ್ರೇಕ್ಷಕರು ನಗೆಗಡಲಲ್ಲಿ ತೇಲುವಂತೆ ಮಾಡಿದರು. ಹಶ್ಮಿ ಹಲವು ಬಾಲಿವುಡ್ ಚಿತ್ರಗಳಲ್ಲಿ ಚುಂಬನದ ದೃಶ್ಯಗಳಿಗಾಗಿ ಪ್ರಸಿದ್ಧರಾಗಿದ್ದಾರೆ.

ದೀಪಾವಳಿಯಂದ ಬಿಡುಗಡೆಯಾದ ಮನೀಶ್ ಶರ್ಮಾ ನಿರ್ದೇಶನದ ಟೈಗರ್ 3 ಚಿತ್ರ ಜಾಗತಿಕ ಬಾಕ್ಸ್ ಆಫೀಸ್ ನಲ್ಲಿ 300 ಕೋಟಿ ರೂ. ಕಲೆಕ್ಷನ್ ಮಾಡಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಕ್ಸಸ್ ಮೀಟ್ ನಲ್ಲಿ ಕತ್ರಿನಾ ಜೊತೆಗೆ ಸಲ್ಮಾನ್ ಖಾನ್ ಡ್ಯಾನ್ಸ್ ಕೂಡಾ ಮಾಡಿದರು. ಆದರೆ, ಹೊಸ ಸಿನಿಮಾ ಹೆಸರು ಘೋಷಿಸಲಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com