ಬಾಕ್ಸ್ ಆಫೀಸ್ ನಲ್ಲಿ ಮುಂದುವರೆದ ಜವಾನ್ ಅಬ್ಬರ, 10 ದಿನದಲ್ಲಿ ಸುಮಾರು 800 ಕೋಟಿ ಗಳಿಕೆ

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅವರು ಬಾಕ್ಸ್ ಆಫೀಸ್ ಕಿಂಗ್ ಆಗಿ ಮತ್ತೊಮ್ಮೆ ಮೋಡಿ ಮಾಡುತ್ತಿದ್ದು, ಜವಾನ್ ಚಿತ್ರ ಬಿಡುಗಡೆಯಾಗಿ 10 ದಿನಕ್ಕೆ ವಿಶ್ವದಾದ್ಯಂತ ಸುಮಾರು 800 ಕೋಟಿ ರೂಪಾಯಿ ಗಳಿಸಿದೆ ಎಂದು ಚಿತ್ರದ...
ಜವಾನ್ ಚಿತ್ರದ ಪೋಸ್ಟರ್
ಜವಾನ್ ಚಿತ್ರದ ಪೋಸ್ಟರ್

ಮುಂಬೈ: ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅವರು ಬಾಕ್ಸ್ ಆಫೀಸ್ ಕಿಂಗ್ ಆಗಿ ಮತ್ತೊಮ್ಮೆ ಮೋಡಿ ಮಾಡುತ್ತಿದ್ದು, ಜವಾನ್ ಚಿತ್ರ ಬಿಡುಗಡೆಯಾಗಿ 10 ದಿನಕ್ಕೆ ವಿಶ್ವದಾದ್ಯಂತ ಸುಮಾರು 800 ಕೋಟಿ ರೂಪಾಯಿ ಗಳಿಸಿದೆ ಎಂದು ಚಿತ್ರದ ನಿರ್ಮಾಪಕರು ಭಾನುವಾರ ತಿಳಿಸಿದ್ದಾರೆ.

ಪ್ಯಾನ್-ಇಂಡಿಯಾ ಚಿತ್ರ ಜವಾನ್ ಬಿಡುಗಡೆಯಾದ 10 ದಿನಗಳಲ್ಲಿ ವಿಶ್ವದಾದ್ಯಂತ ರೂ 797.50 ಕೋಟಿ ರೂಪಾಯಿ ಗಳಿಸಿದೆ ಎಂದು ಪ್ರೊಡಕ್ಷನ್ ಹೌಸ್ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ.

ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ ನಿರ್ದೇಶನದ ಪ್ಯಾನ್-ಇಂಡಿಯಾ ಚಿತ್ರ ಜವಾನ್ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಸೆಪ್ಟೆಂಬರ್ 7 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ.

ಚಿತ್ರದಲ್ಲಿ ನಯನತಾರಾ ಮತ್ತು ವಿಜಯ್ ಸೇತುಪತಿ ಹಾಗೂ ದೀಪಿಕಾ ಪಡುಕೋಣೆ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com