ಬಾಲಿವುಡ್

ಜವಾನ್ ಕಲೆಕ್ಷನ್ ಹಿಂದಿಕ್ಕಿ ಹಿಂದಿ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ 'Stree 2!

ಭಾರತೀಯ ಚಿತ್ರೋದ್ಯಮದ ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ವಿಷಯವನ್ನು ದೃಢಪಡಿಸಿದ್ದಾರೆ.

ಜವಾನ್ ಕಲೆಕ್ಷನ್ ಹಿಂದಿಕ್ಕಿ ಹಿಂದಿ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ 'Stree 2!
Stree 2 ಫೋಸ್ಟರ್
Published On :

ಶ್ರದ್ಧಾ ಕಪೂರ್ ಮತ್ತು ರಾಜ್‌ಕುಮಾರ್ ರಾವ್ ಅವರ 'Stree 2' ಶಾರುಖ್ ಖಾನ್ ಅವರ 'ಜವಾನ್' ನ ಒಟ್ಟು ಕಲೆಕ್ಷನ್‌ ಮೀರಿಸುವ ಮೂಲಕ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಹಿಂದಿ ಚಲನಚಿತ್ರವಾಗಿ ಹೊಸ ದಾಖಲೆ ಬರೆದಿದೆ.

ಭಾರತೀಯ ಚಿತ್ರೋದ್ಯಮದ ಟ್ರೆಂಡ್ ವಿಶ್ಲೇಷಕ ತರಣ್ ಆದರ್ಶ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ವಿಷಯವನ್ನು ದೃಢಪಡಿಸಿದ್ದಾರೆ.

"Stree2 ಹಿಂದಿ ಚಿತ್ರರಂಗದಲ್ಲಿ ಇದುವರೆಗೆ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರವಾಗಿದೆ. ಜವಾನ್ ಕಲೆಕ್ಷನ್ ಹಿಂದಿಕ್ಕಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು ಭಾರತೀಯ ಬಾಕ್ಸ್ ಆಫೀಸ್ ನಲ್ಲಿ ಮುಂದಿನ ವಾರ ರೂ 600 ಕೋಟಿ ಕ್ಲಬ್ ಮುಟ್ಟುತಿದೆ.

ಚಿತ್ರ ಬಿಡುಗಡೆಯಾದ 5ನೇ ವಾರವಾದ ಶುಕ್ರವಾರ 3.60 ಕೋಟಿ, ಶನಿವಾರ 5.55 ಕೋಟಿ, ಭಾನುವಾರ 6.85 ಕೋಟಿ, ಸೋಮವಾರ 3.17 ಕೋಟಿ, ಮಂಗಳವಾರ 2.65 ಕೋಟಿ ಸೇರಿದಂತೆ ಒಟ್ಟಾರೇ 586 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ಅವರು ಬರೆದುಕೊಂಡಿದ್ದಾರೆ.

ಈ ವಾರದ ಹೊತ್ತಿಗೆ, ಹಾರರ್-ಕಾಮಿಡಿ ಚಿತ್ರ ಭಾರತದ ಬಾಕ್ಸ್ ಆಫೀಸ್ ನಲ್ಲಿ ರೂ. 586 ಕೋಟಿ ಗಳಿಸಿದ್ದು, ಪ್ರೇಕ್ಷಕರಲ್ಲಿ ಜನಪ್ರಿಯತೆ ಹೆಚ್ಚಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.