ಎಗ್​ ಫ್ರೀಜ್ ಮಾಡಿದ ನಟಿ: ಮದುವೆ, ಮಕ್ಕಳ ಬಗ್ಗೆ ಮನಬಿಚ್ಚಿ ಮಾತನಾಡಿದ ಕೃತಿ ಸನೋನ್..!

ಮದುವೆ ಅಥವಾ ಮಕ್ಕಳನ್ನು ಹೊಂದುವುದು ಸಮಯದ ಮಿತಿಯ ಕಾರಣದಿಂದ ಅಥವಾ ಸಮಾಜದ ಒತ್ತಡದಿಂದ ಆಗಬಾರದು. ಒಳಗಿನಿಂದ ಸಿದ್ಧವಾಗಿದ್ದೇನೆ ಎನ್ನುವ ಭಾವನೆ ಬಂದಾಗ ಮಾತ್ರ ಆ ನಿರ್ಧಾರ ತೆಗೆದುಕೊಳ್ಳಬೇಕು.
Kriti Sanon
ಕೃತಿ ಸನೋನ್
Updated on

ಮುಂಬೈ: ಬಾಲಿವುಡ್ ನಟಿ ಕೃತಿ ಸನೋನ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಇದೇ ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ್ದಾರೆ.

ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಿತ್ರ Mimiಗಾಗಿ ತಯಾರಿ ನಡೆಸುತ್ತಿದ್ದ ವೇಳೆ ತಾವು ಅಂಡಾಣು ಸಂರಕ್ಷಣೆ (Egg Freezing) ಮಾಡಿಸಿಕೊಂಡಿದ್ದಾಗಿ ಕೃತಿ ಹೇಳಿದ್ದಾರೆ.

ಪಾಡ್‌ಕಾಸ್ಟ್‌ವೊಂದರಲ್ಲಿ ಮಾತನಾಡಿರುವ ನಟಿ, ಮದುವೆ ಹಾಗೂ ಮಕ್ಕಳ ಬಗ್ಗೆ ಆಗಾಗ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಿಸುತ್ತಾ, "ಇದನ್ನು ನಾನು ಮೊದಲ ಬಾರಿಗೆ ಹೇಳುತ್ತಿದ್ದೇನೆ. ನಾನು ನನ್ನ ಅಂಡಾಣುಗಳನ್ನು ಸಂರಕ್ಷಿಸಿ ಇಟ್ಟಿದ್ದೇನೆ" ಎಂದು ಹೇಳಿದರು.

"ಮದುವೆ ಅಥವಾ ಮಕ್ಕಳನ್ನು ಹೊಂದುವುದು ಸಮಯದ ಮಿತಿಯ ಕಾರಣದಿಂದ ಅಥವಾ ಸಮಾಜದ ಒತ್ತಡದಿಂದ ಆಗಬಾರದು. ಒಳಗಿನಿಂದ ಸಿದ್ಧವಾಗಿದ್ದೇನೆ ಎನ್ನುವ ಭಾವನೆ ಬಂದಾಗ ಮಾತ್ರ ಆ ನಿರ್ಧಾರ ತೆಗೆದುಕೊಳ್ಳಬೇಕು. ಜೈವಿಕ ಗಡಿಯಾರ ಅಥವಾ ಒತ್ತಡ ನನ್ನ ಜೀವನದ ಮಹತ್ವದ ನಿರ್ಧಾರಗಳನ್ನು ನಿಯಂತ್ರಿಸಬಾರದು ಎಂದು ನಾನು ಭಾವಿಸಿದ್ದೇನೆ.

ಅಂಡಾಣು ಸಂರಕ್ಷಣೆ ದುಬಾರಿ ವೈದ್ಯಕೀಯ ಪ್ರಕ್ರಿಯೆಯಾಗಿದ್ದು, ಎಲ್ಲರಿಗೂ ಅದು ಸಾಧ್ಯವಾಗುವುದಿಲ್ಲ. ನನಗೆ ಆ ವೆಚ್ಚ ಭರಿಸುವ ಅವಕಾಶವಿತ್ತು. ಅದಕ್ಕಾಗಿ ಈ ನಿರ್ಧಾರ ತೆಗೆದುಕೊಂಡೆ. ಎಲ್ಲರಿಗೂ ಈ ಅವಕಾಶ ಇರುವುದಿಲ್ಲ ಎಂಬುದು ನನಗೆ ಗೊತ್ತು ಎಂದು ತಿಳಿಸಿದರು.

Kriti Sanon
'Cocktail 2' ಭರ್ಜರಿ ಓಟ; ₹100 ಕೋಟಿಗೂ ಅಧಿಕ ಗಳಿಕೆ ಕಂಡ ಶಾಹಿದ್ ಕಪೂರ್, ಕೃತಿ ಸನೋನ್, ರಶ್ಮಿಕಾ ಮಂದಣ್ಣ ನಟನೆಯ ಚಿತ್ರ

'ಮಿಮಿ' ಚಿತ್ರದ ಪಾತ್ರಕ್ಕಾಗಿ ತೂಕ ಹೆಚ್ಚಿಸಬೇಕಾಗಿದ್ದ ಸಂದರ್ಭದಲ್ಲಿ ಈ ಪ್ರಕ್ರಿಯೆ ಮಾಡಿಸಿಕೊಂಡಿದ್ದಾಗಿ ಹೇಳಿದ್ದಾರೆ.

ಈ ಚಿಕಿತ್ಸೆಯಿಂದ ದೇಹದಲ್ಲಿ ಊತ, ಹಾರ್ಮೋನ್‌ಗಳ ಬದಲಾವಣೆ ಹಾಗೂ ಮನಸ್ಥಿತಿಯಲ್ಲಿ ಏರುಪೇರು ಉಂಟಾಗುತ್ತವೆ. ಆದರೆ, ನಾನು ಸಿನಿಮಾಕ್ಕಾಗಿ ತೂಕ ಹೆಚ್ಚಿಸುತ್ತಿದ್ದ ಕಾರಣ ಅದೇ ಸೂಕ್ತ ಸಮಯ ಎಂದು ಭಾವಿಸಿದೆ" ಎಂದರು.

ಅಂಡಾಣು ಸಂರಕ್ಷಣೆ ಸುಲಭ ಪ್ರಕ್ರಿಯೆಯಾಗಿರಲಿಲ್ಲ. ಹಾರ್ಮೋನ್ ಬದಲಾವಣೆಗಳಿಂದ ಮನಸ್ಥಿತಿ ಸಾಕಷ್ಟು ಬದಲಾಗುತ್ತದೆ. ಆದರೂ ಈ ನಿರ್ಧಾರ ತೆಗೆದುಕೊಂಡಿದ್ದಕ್ಕೆ ನನಗೆ ಈಗ ಸಂತೋಷವಿದೆ. ಮದುವೆ ಅಥವಾ ಮಕ್ಕಳ ಬಗ್ಗೆ ಯಾವುದೇ ಕಾಲಮಿತಿಯ ಒತ್ತಡ ಈಗ ನನ್ನ ಮನಸ್ಸಿನಲ್ಲಿ ಇಲ್ಲ" ಎಂದು ಹೇಳಿದರು.

ಈ ಹಿಂದೆ ನಟಿ ಪ್ರಿಯಾಂಕಾ ಚೋಪ್ರಾ ಕೂಡ ತಮ್ಮ 30ರ ದಶಕದ ಆರಂಭದಲ್ಲೇ ಅಂಡಾಣುಗಳನ್ನು ಸಂರಕ್ಷಿಸಿಕೊಂಡಿದ್ದಾಗಿ ಹೇಳಿಕೊಂಡಿದ್ದರು.

ವೃತ್ತಿಜೀವನದ ಮೇಲೆ ಗಮನಹರಿಸಲು ಹಾಗೂ ಸೂಕ್ತ ಸಮಯದಲ್ಲಿ ತಾಯಿಯಾಗುವ ಸ್ವಾತಂತ್ರ್ಯಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾಗಿ ಅವರು ತಿಳಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com