

ಮುಂಬೈ: ಇತ್ತೀಚೆಗೆ ಐಪಿಎಲ್ 2026ರ ಫೈನಲ್ ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಮಣಿಸಿ ಆರ್ ಸಿಬಿ 2ನೇ ಬಾರಿಗೆ ಟ್ರೋಫಿಗೆ ಮುತ್ತಿಟ್ಟ ಬೆನ್ನಲ್ಲೇ ಬಾಲಿವುಡ್ ನಟಿ ವಿಕ್ಟರಿ ಸಂದರ್ಭದ ವಿಡಿಯೋ ಹಂಚಿಕೊಂಡಿದ್ದರು. ಆದರೆ ಅದೇ ವಿಡಿಯೋ ಇದೀಗ ಅವರನ್ನು ವಿವಾದಕ್ಕೆ ಸಿಲುಕಿಸಿದೆ.
ಹೌದು.. ಬಾಲಿವುಡ್ ನಟಿ ನುಶ್ರತ್ ಭರುಚ್ಚಾ ಅವರು ತಮ್ಮ ಇನ್ ಸ್ಟಾಗ್ರಾಂ ನಲ್ಲಿ ಆರ್ ಸಿಬಿ ವಿಕ್ಟರಿ ಸೆಲೆಭ್ರೇಷನ್ ವಿಡಿಯೋ ಹಂಚಿಕೊಂಡು ಆರ್ ಸಿಬಿ ಆಟಗಾರರಿಗೆ ಧನ್ಯವಾದ ಹೇಳಿದ್ದರು.
ಆದರೆ ಅದು ಅಷ್ಟಕ್ಕೇ ಸೀಮಿತವಾಗಿದ್ದರೆ ಇದು ಈ ಮಟ್ಟಿಗೆ ಸುದ್ದಿಯಾಗುತ್ತಿರಲಿಲ್ಲ. ಆದರೆ ಟಿವಿಯಲ್ಲಿ ಪ್ರಸಾರವಾದ ಐಪಿಎಲ್ ಫೈನಲ್ ಪಂದ್ಯದ ವಿಡಿಯೋ ಜೊತೆಗೆ ಅದರ ಹಿನ್ನಲೆಯಲ್ಲಿ ಕೇಳಿಬಂದ ಶಬ್ದಗಳನ್ನು ನೆಟ್ಟಿಗರು ಪತ್ತೆ ಮಾಡಿ ನಟಿಯನ್ನು ಭೀಕರವಾಗಿ ಟ್ರೋಲ್ ಮಾಡುತ್ತಿದ್ದಾರೆ.
ಈಗಾಗಲೇ ಈ ವಿಡಿಯೋ ವ್ಯಾಪಕ ವೈರಲ್ ಆಗಿದ್ದು, ವಿವಾದದ ಗಂಭೀರತೆ ಅರಿತ ನಟಿ ನುಶ್ರತ್ ಭರುಚ್ಚಾ ಕೂಡಲೇ ಅದನ್ನು ಡಿಲೀಟ್ ಕೂಡ ಮಾಡಿದ್ದರು. ಆದರೆ ನೆಟ್ಟಿಗರು ಅದನ್ನು ಅದಾಗಲೇ ವ್ಯಾಪಕವಾಗಿ ಶೇರ್ ಮಾಡಿದ್ದರಿಂದ ಅದು ಮತ್ತೆ ವೈರಲ್ ಆಗ ತೊಡಗಿತ್ತು.
ಏನದು ಸೌಂಡ್? ನೆಟ್ಟಿಗರು ಹೇಳಿದ್ದೇನು? ಟ್ರೋಲ್ ಏಕೆ?
ಇನ್ನು ನಟಿ ನುಶ್ರತ್ ಭರುಚ್ಚಾ ಅಪ್ಲೋಡ್ ಮಾಡಿದ್ದ ಆರ್ ಸಿಬಿ ವಿಕ್ಟರಿ ವಿಡಿಯೋ ಆಚರಣೆಗಿಂತ ಅದರ ಹಿನ್ನೆಲೆ ಧ್ವನಿಯೇ ಹೆಚ್ಚು ಗಮನ ಸೆಳೆದಿತ್ತು. ವಿಡಿಯೋ ಹಿನ್ನಲೆಯಲ್ಲಿ ದಂಪತಿಗಳ ಖಾಸಗಿ ಕ್ಷಣಗಳ ಶಬ್ದದ ರೀತಿಯ ಸೌಂಡ್ ಗಳು ದಾಖಲಾಗಿವೆ ಎಂದು ನೆಟ್ಟಿಗರು ದೂರಿದ್ದಾರೆ. ಇದೇ ಕಾರಣಕ್ಕೆ ನಟಿ ನುಶ್ರತ್ ಆ ವಿಡಿಯೋವನ್ನು ಕೂಡಲೇ ಡಿಲೀಟ್ ಮಾಡಿದ್ದರು.
ಆದರೂ ಕೆಲವೇ ಗಂಟೆಗಳಲ್ಲಿ ಈ ಕ್ಲಿಪ್ ಎಕ್ಸ್ (ಹಿಂದಿನ ಟ್ವಿಟರ್), ಇನ್‌ಸ್ಟಾಗ್ರಾಂ, ರೆಡಿಟ್ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿದ್ದು, ಸಾವಿರಾರು ಪ್ರತಿಕ್ರಿಯೆಗಳು, ಮೀಮ್ಸ್ ಮತ್ತು ಚರ್ಚೆಗಳಿಗೆ ಕಾರಣವಾಯಿತು. ಕೆಲವರು ವೈರಲ್ ಕ್ಲಿಪ್ ಆಧರಿಸಿ ನಟಿಯನ್ನು ಟೀಕಿಸಿದರೆ, ಇನ್ನೂ ಕೆಲವರು ಯಾವುದೇ ವಿಷಯವನ್ನು ಪರಿಶೀಲಿಸದೆ ತೀರ್ಮಾನಕ್ಕೆ ಬರಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ, ಎಡಿಟ್ ಮಾಡಿದ ವಿಡಿಯೊಗಳು ಹಾಗೂ ಮಾರ್ಫಿಂಗ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಇಂತಹ ವೈರಲ್ ವಿಷಯಗಳ ಬಗ್ಗೆ ಎಚ್ಚರಿಕೆಯಿಂದಿರಬೇಕೆಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಸ್ವತಂತ್ರ ದೃಢೀಕರಣ ಲಭ್ಯವಿಲ್ಲ
ಈ ವೈರಲ್ ವಿಡಿಯೊ ಕುರಿತು ವರದಿ ಮಾಡಿರುವ ಹಲವು ಮಾಧ್ಯಮಗಳು ಮತ್ತು ಫ್ಯಾಕ್ಟ್-ಚೆಕ್ ಸಂಸ್ಥೆಗಳು, ಈ ಸ್ಕ್ರೀನ್ ರೆಕಾರ್ಡಿಂಗ್ ನುಶ್ರತ್ ಭರುಚ್ಚಾ ಅವರ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಿಂದಲೇ ಬಂದಿದೆ ಎಂಬುದಕ್ಕೆ ಇದುವರೆಗೆ ಸ್ವತಂತ್ರವಾಗಿ ದೃಢೀಕರಿಸಬಹುದಾದ ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ ಎಂದು ತಿಳಿಸಿವೆ.
ಡಿಜಿಟಲ್ ತಜ್ಞರ ಪ್ರಕಾರ, ಇಂತಹ ಸ್ಕ್ರೀನ್ ರೆಕಾರ್ಡಿಂಗ್‌ಗಳು ಹಾಗೂ ಕಿರು ವಿಡಿಯೊಗಳನ್ನು ಎಡಿಟ್ ಮಾಡುವುದು ಸುಲಭವಾಗಿರುವುದರಿಂದ, ಮೂಲ ವಿಡಿಯೊ ಇಲ್ಲದೆ ಅದರ ಸತ್ಯಾಸತ್ಯತೆ ನಿರ್ಧರಿಸುವುದು ಕಷ್ಟಕರ. ಈ ಕ್ಲಿಪ್ ನಿಜವಾಗಿಯೂ ನುಶ್ರತ್ ಭರುಚ್ಚಾ ಅವರ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಿಂದ ಹಂಚಿಕೊಳ್ಳಲ್ಪಟ್ಟಿದೆಯೇ ಅಥವಾ ಅದನ್ನು ತಿದ್ದುಪಡಿ ಮಾಡಿ ವೈರಲ್ ಮಾಡಲಾಗಿದೆಯೇ ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿವೆ.
ಕೊನೆಗೂ ಮೌನ ಮುರಿದ ನಟಿ ಹೇಳಿದ್ದೇನು?
ಈ ವೈರಲ್ ವಿಡಿಯೋ ಕ್ಲಿಪ್ ವಿವಾದ ತಾರಕಕ್ಕೇರುತ್ತಲೇ ಕೊನೆಗೂ ನಟಿ ನುಶ್ರತ್ ಭರುಚ್ಚಾ ತಮ್ಮ ಮೌನ ಮುರಿದಿದ್ದು, ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಡಿಯೊ ತಮ್ಮದಲ್ಲ ಎಂದು ಅವರು ಸ್ಪಷ್ಟಪಡಿಸಿದ್ದು, "ಅದು ನನ್ನ ಧ್ವನಿಯೇ ಅಲ್ಲ" ಎಂದು ಹೇಳಿದ್ದಾರೆ.
''ನಿಮ್ಮ ಕೆಟ್ಟ ಆಲೋಚನೆ ಶಾಂತಗೊಳಿಸಿ.. ಇದು ನನ್ನ ಸ್ನೇಹಿತೆ ಮಾಡಿದ ವಿಡಿಯೋ... ಕೆಲವರು ವಿವಾದ ಮಾಡಲೆಂದೇ ಕಾಯುತ್ತಿರುತ್ತಾರೆ. ಒಂದು ನಾಯಿ ಮರಿ ಅಳುವ ಶಬ್ದ ಈ ಪರಿ ಅವರ ನಿದ್ದೆ ಗೆಡಿಸಿದೆ. ಯಾರೋ ನನ್ನ ಪರವಾಗಿ ನಕಲಿ ಸ್ಪಷ್ಟೀಕರಣವನ್ನು ನೀಡಿದ್ದಾರೆ. ವಾಸ್ತವ ಇಲ್ಲಿದೆ. ನಾನು ನನ್ನ ಸ್ನೇಹಿತನ ಮನೆಯಲ್ಲಿ ಐಪಿಎಲ್ ಫೈನಲ್ ಪಂದ್ಯವನ್ನು ವೀಕ್ಷಿಸುತ್ತಿದ್ದೆ, ಇದೇ ಸಂದರ್ಭದಲ್ಲಿ ಅವರ ಚಿಕ್ಕ ನಾಯಿಮರಿ ಅಳುವ 'ಶಬ್ದಗಳನ್ನು' ಮಾಡುತ್ತಿತ್ತು." ನನ್ನ ಸ್ನೇಹಿತ ಅದೇ ಸಮಯದಲ್ಲಿ ಬೇರೆ ಕೋನದಿಂದ ಅದೇ ಶಬ್ದಗಳೊಂದಿಗೆ ಮಾಡಿದ ವೀಡಿಯೊ." ಅದು ನಟಿ ಸ್ಪಷ್ಟನೆ ನೀಡಿದ್ದಾರೆ.
ಆದಾಗ್ಯೂ, ಅವರ ಸ್ಪಷ್ಟನೆಯ ನಂತರವೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಮುಂದುವರಿದಿದೆ. ಕೆಲವರು ಅವರ ಹೇಳಿಕೆಯನ್ನು ಬೆಂಬಲಿಸಿದರೆ, ಇನ್ನು ಕೆಲವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
Advertisement