'Bhooki Bhumi: ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಬಾಲಿವುಡ್ ನಟಿ 'ಭೂಮಿ ಪೆಡ್ನೇಕರ್'; ಏನೆಲ್ಲಾ ಮಾಡಿದ್ರು? ಈ Video ನೋಡಿ...

ಭೂಮಿ ಪ್ರಶಾಂತವಾದ ಆಶ್ರಮದಿಂದ ವೀಕ್ಷಕರನ್ನು ಸ್ವಾಗತಿಸುವುದರೊಂದಿಗೆ ವಿಡಿಯೋ ಪ್ರಾರಂಭವಾಗುತ್ತದೆ.
Bhumi Pednekar
ಭೂಮಿ ಪೆಡ್ನೇಕರ್
Updated on

ನಟಿ ಭೂಮಿ ಪೆಡ್ನೇಕರ್ ತಮ್ಮ ಇನ್ಸಾಟಾಗ್ರಾಮ್ ಸರಣಿ( Instagram series)'ಭುಕಿ ಭೂಮಿ'ಯ ಹೊಸ ಸಂಚಿಕೆಯಲ್ಲಿ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಭೇಟಿ ನೀಡಿ, ಅಲ್ಲಿನ ಬೃಹತ್ ಅಡುಗೆಮನೆ ಮತ್ತು ಸಾತ್ವಿಕ ಆಹಾರ ಪದ್ಧತಿಯನ್ನು ಪರಿಚಯಿಸಿದ್ದಾರೆ. ಭೂಮಿ ಪ್ರಶಾಂತವಾದ ಆಶ್ರಮದಿಂದ ವೀಕ್ಷಕರನ್ನು ಸ್ವಾಗತಿಸುವುದರೊಂದಿಗೆ ವಿಡಿಯೋ ಪ್ರಾರಂಭವಾಗುತ್ತದೆ.

"ಹಲೋ, ನಮಸ್ತೆ. ನಾವು ಸುಂದರವಾದ ಆಶ್ರಮದಲ್ಲಿದ್ದೇವೆ. ಭೂಕಿ ಭೂಮಿಗೆ ಸ್ವಾಗತ ಎಂದು ನಟಿ ಹೇಳುವುದರೊಂದಿಗೆ ಮೆನು ಲಿಸ್ಟ್ ತೋರಿಸುತ್ತಾರೆ. ಸ್ಪ್ರೆಡ್‌ನಲ್ಲಿ ಪಾಲಕ್ ಪನೀರ್, ರಸಂ ಮತ್ತಿತರ ಆಹಾರ ಪದಾರ್ಥಗಳು ಇರುತ್ತವೆ. ಭೂಮಿ ಪೆಡ್ನೇಕರ್ ಅವರು ಇಲ್ಲಿ 'ಲೌಕಿ ಸೂಪ್' (Lauki Soup - ಸೋರೆಕಾಯಿ ಸೂಪ್) ಮತ್ತು ರಾಗಿ ಬ್ರೆಡ್ ಅನ್ನು ಸವಿದಿದ್ದಾರೆ. ಬಳಿಕ ಕ್ವಿನೋವಾ ಸಲಾಡ್ ಮತ್ತು ಪಾಸ್ತಾ ತಿನ್ನುತ್ತಾರೆ. ಲೌಕಿ ಹಲ್ವಾ ಸಖತ್ ಆಗಿತ್ತು ಎನ್ನುತ್ತಾರೆ.

ಎರಡನೇ ದಿನ ಭೂಮಿ ಗೋಶಾಲೆಗೆ ತೆರಳಿ ಅಲ್ಲಿನ ಹಸುಗಳಿಗೆ ಆಹಾರವನ್ನು ನೀಡುತ್ತಾರೆ. ಇಲ್ಲಿಂದಲೇ ಬೆಳಗಿನ ಹಾಲು ದೊರೆಯುತ್ತದೆ ಎಂದು ಹೇಳುತ್ತಾರೆ. ಬಳಿಕ ತೆಂಗಿನಕಾಯಿ ಚಟ್ನಿ ಮತ್ತು ಸಾಂಬಾರ್‌ನೊಂದಿಗೆ ಉಪ್ಮಾ ಮತ್ತು ರವಾ ಇಡ್ಲಿ ಸವಿಯುತ್ತಾರೆ. ರಾಗಿ ಬ್ರೆಡ್‌ನಲ್ಲಿ ಮನೆಯಲ್ಲಿ ತಯಾರಿಸಿದ ಸ್ಟ್ರಾಬೆರಿ ಜಾಮ್, ಆಶ್ರಮ ಬೇಕರಿಯ ಕ್ರೋಸೆಂಟ್, ಮೊಳಕೆಕಾಳು ಕೂಡಾ ತಿನ್ನಲು ಪ್ರಯತ್ನಿಸುತ್ತಾರೆ.

ನಂತರ, ಭೂಮಿ ಆಶ್ರಮದ ಮೆಗಾ ಕಿಚನ್‌ಗೆ ಭೇಟಿ ನೀಡುತ್ತಾರೆ. ಇಲ್ಲಿ ಪ್ರತಿದಿನ 25,000 ಜನರಿಗೆ ಆಹಾರವನ್ನು ತಯಾರಿಸಲಾಗುತ್ತದೆ. "ಆಶ್ರಮದಲ್ಲಿ ಯಾವುದೇ ತ್ಯಾಜ್ಯವಿರಲಿ ಅದನ್ನು ಗೊಬ್ಬರವಾಗಿ ಪರಿವರ್ತಿಸಲಾಗುತ್ತದೆ ಮತ್ತು ಅದರಿಂದ ಪಡೆದ ಜೈವಿಕ ಅನಿಲವನ್ನು ಆಹಾರವನ್ನು ಬೇಯಿಸಲು ಬಳಸಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.

ಅವರ ಮಧ್ಯಾಹ್ನದ ಊಟ ಕಚೋರಿ ಮತ್ತು ಕೋಲ್ಡ್ ಪಾಸ್ತಾ ಸಲಾಡ್‌ನೊಂದಿಗೆ ಪ್ರಾರಂಭವಾಗುತ್ತದೆ. ನಂತರ ಉತ್ತರ ಭಾರತೀಯ ಪನೀರ್ ಮತ್ತು ರೊಟ್ಟಿ ತಿನ್ನುತ್ತಾರೆ. ಅಲ್ಲಿ ಪಾಪಡ್, ಕೊತ್ತಿಂಬೀರ್, ಹುಣಸೆಹಣ್ಣು ಅನ್ನ, ರಸಂ ಅನ್ನ ಮತ್ತು ದಹಿ ಮತ್ತಿತರ ಆಹಾರ ಪದಾರ್ಥಗಳು ಇರುತ್ತವೆ.

ನನ್ನೊಂದಿಗೆ ಹೆಚ್ಚು ಉಳಿದದ್ದು ಪ್ರೀತಿ ಎಂದು ಅವರು ಕೊನೆಯಲ್ಲಿ ಬರೆದುಕೊಂಡಿದ್ದಾರೆ. ಏಕೆಂದರೆ ಕೆಲವೊಮ್ಮೆ ಆಹಾರವು ಕೇವಲ ರುಚಿಯ ಬಗ್ಗೆ ಅಲ್ಲ, ಅದು ಸೇವೆ, ಸಮುದಾಯ ಮತ್ತು ಪ್ರತಿ ಊಟದ ಹಿಂದಿನ ಜನರ ಬಗ್ಗೆಯಾಗಿದೆ. ನಾನು ಹೊಟ್ಟೆ ತುಂಬಾ ಊಟದ ಜೊತೆಗೆ ವ್ಯಕ್ತಿಯ ಜೀವನವನ್ನು ಉತ್ತಮಗೊಳಿಸುವುದು ಎಂದರೆ ಏನು ಎಂಬುದರ ಬಗ್ಗೆ ತೀವ್ರ ಮೆಚ್ಚುಗೆಯೊಂದಿಗೆ ಹೊರಟೆ ಎಂದು ಹೇಳಿಕೊಂಡಿದ್ದಾರೆ.

Bhumi Pednekar
'ನಿಮ್ಮ ಮನಸ್ಸಿನಲ್ಲೇ ನೀವು ಬಲಿಪಶುವಾಗಿದ್ದೀರಿ': 'ಬುರ್ಖಾ ಹಿತಕರ' ಎಂದ ಮಹಿಳೆಯರ ವಿರುದ್ಧ ಬಾಲಿವುಡ್ ನಿರ್ದೇಶಕ Imtiaz Ali ಕಿಡಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com