

ಸಿನಿಮಾ ಜಗತ್ತಿನಲ್ಲಿ ಸ್ಟಾರ್ ನಟ-ನಟಿಯರು ದುಬಾರಿ ಕಾರುಗಳು ಹಾಗೂ ಕೋಟಿ ಬೆಲೆಯ ಐಷಾರಾಮಿ ಮನೆಗಳನ್ನು ಹೊಂದುವುದು ಸಾಮಾನ್ಯ. ಆದರೆ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಸ್ವಂತಕ್ಕೊಂದು ಖಾಸಗಿ ದ್ವೀಪವನ್ನೇ (Private Island) ಹೊಂದಿರುವ ಏಕೈಕ ನಟಿ ಯಾರು ಗೊತ್ತಾ? ದೀಪಿಕಾ ಪಡುಕೋಣೆ, ಐಶ್ವರ್ಯಾ ರೈ, ಆಲಿಯಾ ಭಟ್, ಪ್ರಿಯಾಂಕಾ ಚೋಪ್ರಾ ಅಲ್ಲ ಈ ನಟಿಯ ಬಳಿ ಇದೆಯಂತೆ ತನ್ನದೇ ಆದ ಸ್ವಂತ ದ್ವೀಪ!
ಹೌದು, ಕನ್ನಡದ ವಿಕ್ರಾಂತ್ ರೋಣ ಸಿನಿಮಾದಲ್ಲೂ ಅಬ್ಬರಿಸಿ ಸ್ಯಾಂಡಲ್‌ವುಡ್ ಪ್ರೇಕ್ಷಕರ ಮನಗೆದ್ದಿರುವ ಈ ಸುಂದರಿ, ಕೇವಲ ಗ್ಲಾಮರ್‌ನಿಂದಷ್ಟೇ ಅಲ್ಲ, ತಮ್ಮ ಬೃಹತ್ ವ್ಯಾಪಾರ ಸಾಮ್ರಾಜ್ಯ ಮತ್ತು ಕೋಟ್ಯಂತರ ರೂಪಾಯಿ ಆಸ್ತಿಯಿಂದಲೂ ಎಲ್ಲರ ಹುಬ್ಬೇರಿಸಿದ್ದಾರೆ. ಶ್ರೀಲಂಕಾದಿಂದ ಬಂದು ಬಾಲಿವುಡ್ ಜೊತೆಗೆ ದಕ್ಷಿಣ ಭಾರತದಲ್ಲೂ ಸದ್ದು ಮಾಡಿದ ಆ ನಟಿಯ ಅಪಾರ ಸಂಪತ್ತಿನ ಅಚ್ಚರಿಯ ಸತ್ಯ ಇಲ್ಲಿದೆ...
ಸ್ವಂತ ಐಲ್ಯಾಂಡ್ ಹೊಂದಿರುವ ಏಕೈಕ ನಟಿ!
ತನ್ನದೇ ಆದ ಸ್ವಂತ ಐಲ್ಯಾಂಡ್ (ಖಾಸಗಿ ದ್ವೀಪ) ಹೊಂದಿರುವ ಏಕೈಕ ನಟಿ ಅಂದರೆ ಅದು ರಾ ರಾ ರಕ್ಕಮ್ಮ ಖ್ಯಾತಿಯ ಜಾಕ್ವೆಲಿನ್ ಫರ್ನಾಂಡಿಸ್. ಕಿಚ್ಚ ಸುದೀಪ್ ಅಭಿನಯದ ಸೂಪರ್ ಹಿಟ್ ವಿಕ್ರಾಂತ್ ರೋಣ ಚಿತ್ರದ ರಕ್ಕಮ್ಮ ಹಾಡಿನ ಮೂಲಕ ಸ್ಯಾಂಡಲ್‌ವುಡ್ ಪ್ರೇಕ್ಷಕರ ಮನಗೆದ್ದಿರುವ ಇವರು, ಭಾರತೀಯ ಚಿತ್ರರಂಗದಲ್ಲೇ ಇಂತಹ ಅಪರೂಪದ ಆಸ್ತಿ ಹೊಂದಿರುವ ಏಕೈಕ ನಟಿಯಾಗಿದ್ದಾರೆ.
ಸ್ವಂತ ದ್ವೀಪ ಎಲ್ಲಿದೆ? ದ್ವೀಪದ ಬೆಲೆ ಎಷ್ಟು?
ಮೂಲತಃ ಶ್ರೀಲಂಕಾದವರಾದ ಜಾಕ್ವೆಲಿನ್, ತಮ್ಮ ತಾಯ್ನಾಡಿನ ದಕ್ಷಿಣ ಕರಾವಳಿ ತೀರದಲ್ಲಿ 4 ಎಕರೆ ವಿಸ್ತೀರ್ಣದ ಸುಂದರ ಖಾಸಗಿ ದ್ವೀಪವನ್ನು ಖರೀದಿಸಿದ್ದಾರೆ. ವರದಿಗಳ ಪ್ರಕಾರ, ಅವರು ಈ ದ್ವೀಪವನ್ನು 2012 ರಲ್ಲೇ ಸುಮಾರು 6 ಲಕ್ಷ ಡಾಲರ್ (ಆ ಸಮಯದಲ್ಲಿ ಸುಮಾರು ₹3 ಕೋಟಿ) ನೀಡಿ ಖರೀದಿಸಿದ್ದರು ಎನ್ನಲಾಗಿದ್ದು, ಅಲ್ಲಿ ಅವರು ಅದ್ದೂರಿ ವಿಲ್ಲಾವನ್ನು ನಿರ್ಮಿಸಲು ಉದ್ದೇಶಿಸಿದ್ದಾರೆ.
ನೂರಾರು ಕೋಟಿ ಆಸ್ತಿಯ ಒಡತಿ
ಬಾಲಿವುಡ್ ಸೇರಿದಂತೆ ವಿವಿಧ ಚಿತ್ರರಂಗಗಳಲ್ಲಿ ಸಕ್ರಿಯರಾಗಿರುವ ಇವರ ಒಟ್ಟು ಆಸ್ತಿಯ ಮೌಲ್ಯ ₹100 ಕೋಟಿಗೂ ಅಧಿಕ ಎಂದು ಅಂದಾಜಿಸಲಾಗಿದೆ. ಅದರಂತೆ, ಇವರ ಬಳಿ ಮುಂಬೈನಲ್ಲಿರುವ ಐಷಾರಾಮಿ ಅಪಾರ್ಟ್‌ಮೆಂಟ್ ಜೊತೆಗೆ ರೇಂಜ್ ರೋವರ್, ಜೀಪ್ ಮತ್ತು ಬಿಎಂಡಬ್ಲ್ಯು ಸೇರಿದಂತೆ ದುಬಾರಿ ಕಾರುಗಳ ಕಲೆಕ್ಷನ್ ಇದೆ.