ಹಾಲಿವುಡ್ ಗೆ ಪಾದಾರ್ಪಣೆ ಮಾಡಲಿರುವ ಹೃತಿಕ್ ರೋಶನ್

ಹಾಲಿವುಡ್ ಸಿನೆಮಾವೊಂದಕ್ಕೆ ಇತ್ತೀಚೆಗೆ ಹೃತಿಕ್ ರೋಶನ್ ಅವರಿಗೆ ಕರೆ ಬಂದಿದೆ. 'ಬ್ಯಾಂಗ್ ಬ್ಯಾಂಗ್' ನಟ ತನ್ನ ಸಿಕ್ಸ್-ಪ್ಯಾಕ್ ದೇಹ ಮತ್ತು ಆಕ್ಷನ್ ನಟನೆಗೆ ಪ್ರಸಿದ್ಧ.
ಹೃತಿಕ್ ರೋಶನ್
ಹೃತಿಕ್ ರೋಶನ್

ಮುಂಬೈ: ಹಾಲಿವುಡ್ ಸಿನೆಮಾವೊಂದಕ್ಕೆ ಇತ್ತೀಚೆಗೆ ಹೃತಿಕ್ ರೋಶನ್ ಅವರಿಗೆ ಕರೆ ಬಂದಿದೆ.

'ಬ್ಯಾಂಗ್ ಬ್ಯಾಂಗ್' ನಟ ತನ್ನ ಸಿಕ್ಸ್-ಪ್ಯಾಕ್ ದೇಹ ಮತ್ತು ಆಕ್ಷನ್ ನಟನೆಗೆ ಪ್ರಸಿದ್ಧ. ಈ ನಟ ದೊಡ್ಡ ಮಟ್ಟದಲ್ಲಿ ಹಾಲಿವುಡ್ ಗೆ ಪಾದಾರ್ಪಣೆ ಮಾಡಲಿದ್ದಾರೆ ಎಂಬ ಸುದ್ದಿ ದಟ್ಟವಾಗಿದೆ. ಹಾಲಿವುಡ್ ಗೆ ಕರೆ ಬಂದಿರುವುದು ಇದೇ ಮೊದಲೇನಲ್ಲ. ಈ ಹಿಂದೆ 'ಪಿಂಕ್ ಪ್ಯಾಂಥರ್ -೨' ಸಿನೆಮಾಗೂ ಈ ನಟನನ್ನು ಕೇಳಲಾಗಿತ್ತು ಆದರೆ ಹೃತಿಕ್ ನಿರಾಕರಿಸಿದ್ದರು.

ಟಿವಿ ಕಾರ್ಯಕ್ರಮವೊಂದರಲ್ಲಿ ಈ ವದಂತಿಯ ಬಗ್ಗೆ ವರದಿಗಾರರ ಜೊತೆ ಮಾನಾಡಿದ ಹೃತಿಕ್ "ಹೌದು, ಈ ವರ್ಷ ಹಾಲಿವುಡ್ ಯೋಜನೆಯೊಂದು ನನ್ನ ಕೈಲಿದೆ" ಎಂದಿದ್ದಾರೆ.

ಸದ್ಯಕ್ಕೆ ಅಶುತೋಶ್ ಗೌರೀಕರ್ ಅವರ 'ಮೊಹೆಂಜೋ ದಾರೋ' ಸಿನೆಮಾ ಚಿತ್ರೀಕರಣದಲ್ಲಿ ಹೃತಿಕ್ ನಿರತರಾಗಿದ್ದು, ಮುಂದಿನ ವರ್ಷ ಈ ಸಿನೆಮಾ ಬಿಡುಗಡೆಯಾಗಲಿದೆ.

ಹಾಲಿವುಡ್ ಸಿನೆಮಾದ ಬಗ್ಗೆ ಅಧಿಕೃತವಾಗಿ ಅವರೇ ಘೋಷಣೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com