

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಗೌಡ ಅವರು ನಿರ್ಮಾಪಕ ಕೆಸಿಎನ್ ಮೋಹನ್ ಹಾಗೂ ನಿರ್ದೇಶಕಿ ಪೂರ್ಣಿಮಾ ಮೋಹನ್ ಅವರ ಮುದ್ದಿನ ಮಗಳು ಸ್ವಾತಿಯ ಕೈ ಹಿಡಿಯಲಿದ್ದಾರೆ.
ಈ ಕುರಿತು ಕನ್ನಡಪ್ರಭ.ಕಾಮ್‌ಗೆ ಮಾತನಾಡಿದ ಕೆಸಿಎನ್ ಮೋಹನ್ ಅವರು, ಹೌದು, ಮದುವೆ ಪ್ರಸ್ತಾಪ ಇದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ಕುಟುಂಬ ನಮ್ಮ ಮಗಳನ್ನು ನೋಡಲು ಇಂದು ಮನೆಗೆ ಬರುತ್ತಿದ್ದಾರೆ. ಮಾತುಕತೆಯ ಬಳಿಕ ಅಧಿಕೃತವಾಗಿ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.
ಎಂಐಟಿ ಬಿರ್ಲಾದಲ್ಲಿ ಎಂಬಿಎ ಪದವಿ ಪಡೆದಿರುವ ಸ್ವಾತಿ ಅವರು, ನಾಯಕ ನಟನಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿರುವ ನಿಖಿಲ್ ಗೌಡ ಅವರನ್ನು ವರಿಸಲಿದ್ದಾರೆ.
ಪೂರ್ಣಿಮಾ ಮೋಹನ್ ಅವರು ಮಾಜಿ ಸಂಸದೆ ರಮ್ಯಾ ಅಭಿನಯದ ಜೂಲಿ ಚಿತ್ರದ ನಿರ್ದೇಶನ ಮಾಡಿದ್ದರು.