

ಚೆನ್ನೈ: ಮಲಯಾಳಮ್ ಬ್ಲಾಕ್ ಬಸ್ಟರ್ ಸಿನೆಮಾ 'ಪ್ರೇಮಮ್' ನ ತೆಲುಗು ರಿಮೇಕ್ ನಲ್ಲಿ ನಾಯಕನಟಿಯಾಗಿ ಪಾತ್ರ ಪಡೆದಿರುವ ಶೃತಿ ಹಾಸನ್ ಅವರು ಕಾಲೇಜು ಉಪನ್ಯಾಸಕಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
"ರಿಮೇಕ್ ಚಿತ್ರದಲ್ಲಿ ಶೃತಿ, ಮೂಲದಲ್ಲಿನ ಸಾಯಿ ಪಲ್ಲವಿ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಪಾತ್ರಕ್ಕಾಗಿ ಅವರು ಹೊಸ ಅವತಾರ ತಾಳಲಿದ್ದಾರಂತೆ. ಅವರು ಪಾತ್ರಕ್ಕಾಗಿ ಈಗಗಾಲೇ ಸಿದ್ಧತೆ ಪ್ರಾರಂಭಿಸಿದ್ದಾರೆ" ಎಂದು ಮೂಲಗಳು ತಿಳಿಸಿವೆ.
ಚಂದು ಮೊಂಡೆತಿ ನಿರ್ದೇಶಿಸಲಿರುವ ಈ ಸಿನೆಮಾಗೆ ತಾತ್ಕಾಲಿಕವಾಗಿ 'ಮಜ್ನು' ಎಂದು ಹೆಸರಿಸಲಾಗಿದೆ. ನಾಗ ಚೈತನ್ಯ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಮೂಲದಲ್ಲಿ ಕಾಣಿಸಿಕೊಂಡಿದ್ದ ಅನುಪಮ ಪರಮೇಶ್ವರನ್ ರಿಮೇಕ್ ನಲ್ಲೂ ಪಾತ್ರ ಉಳಿಸಿಕೊಂಡಿದ್ದಾರೆ. ಡಿಸೆಂಬರ್ ಮೊದಲ ವಾರದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ.