ಮಹಿಳಾ ಪೊಲೀಸರ ಜೊತೆ ನಟಿ ತಾರಾ ಗೌರಿ ಹಬ್ಬ ಆಚರಣೆ

ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧ ಗೌರಿ ಹಬ್ಬವನ್ನು ಒಂದು ದಿನ ಮುಂಚಿತವಾಗಿಯೇ ಪೊಲೀಸ್ ಠಾಣೆಯಲ್ಲಿ ಆಚರಿಸಿದ್ದಾರೆ...
ನಟಿ ತಾರಾ
ನಟಿ ತಾರಾ
Updated on

ಬೆಂಗಳೂರು: ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧ ಗೌರಿ ಹಬ್ಬವನ್ನು ಒಂದು ದಿನ ಮುಂಚಿತವಾಗಿಯೇ ಪೊಲೀಸ್ ಠಾಣೆಯಲ್ಲಿ ಆಚರಿಸಿದ್ದಾರೆ. ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಸುಮಾರು 30 ಮಂದಿ ಮಹಿಳಾ ಪೊಲೀಸರಿಗೆ ಬಾಗಿನ ನೀಡಿದ ತಾರಾ ಅನುರಾಧ ಗೌರವ ಅರ್ಪಿಸಿದರು.

ತಾವು ಕಲಾವಿದೆಯಾಗಿ ಹಾಗೂ ರಾಜಕಾರಣಿಯಾಗಿ ಪೊಲೀಸರ ಕಾರ್ಯವನ್ನು ಕಂಡಿದ್ದೇನೆ. ಹಬ್ಬ ಹರಿದಿನಗಳಲ್ಲೂ ಇವರುಗಳಿಗೆ ರಜೆಯಿರುವುದಿಲ್ಲ. ಜನರ ರಕ್ಷಣೆಗಾಗಿ ಹಗಲಿರುಳು ಶ್ರಮಿಸುವ ಮಹಿಳಾ ಪೊಲೀಸರಿಗೆ ಗೌರಿ ಹಬ್ಬದ ಅಂಗವಾಗಿ ಬಾಗಿನ ನೀಡಿ ಗೌರವಿಸುತ್ತಿರುವುದಾಗಿ  ಹೇಳಿದರು.





Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com