ಅಕ್ಚೋಬರ್ 23ಕ್ಕೆ ಬಾಹುಬಲಿ-2 ಚಿತ್ರದ ಮೊದಲ ಟ್ರೈಲರ್ ಬಿಡುಗಡೆ

ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರ ಬಹು ನಿರೀಕ್ಷಿತ ಚಿತ್ರದ ಮೊದಲ ಅಧಿಕೃತ ಟೀಸರ್ ಇದೇ ಅಕ್ಟೋಬರ್ 23ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿದೆ.
ಬಾಹುಬಲಿ ಚಿತ್ರದಲ್ಲಿ ನಟ ಪ್ರಭಾಸ್ (ಸಂಗ್ರಹ ಚಿತ್ರ)
ಬಾಹುಬಲಿ ಚಿತ್ರದಲ್ಲಿ ನಟ ಪ್ರಭಾಸ್ (ಸಂಗ್ರಹ ಚಿತ್ರ)

ಹೈದರಾಬಾದ್: ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರ ಬಹು ನಿರೀಕ್ಷಿತ ಚಿತ್ರದ ಮೊದಲ ಅಧಿಕೃತ ಟೀಸರ್ ಇದೇ ಅಕ್ಟೋಬರ್ 23ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ  ಹೇಳಿದೆ.

ಅಕ್ಟೋಬರ್ 23ರಂದು ಚಿತ್ರದ ನಾಯಕ ನಟ ಪ್ರಭಾಸ್ ಅವರ ಜನ್ಮದಿನವಾಗಿದ್ದು, ಅಂದೇ ಬಹು ನಿರೀಕ್ಷಿತ ಚಿತ್ರ ಬಾಹುಬಲಿ-2 ನ ಮೊದಲ ಅಧಿಕೃತ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ  ನಿರ್ದೇರಿಸಿದೆ. ಈ ಹಿಂದೆಯೂ ಕೂಡ ಇದೇ ಪ್ರಚಾರ ತಂತ್ರವನ್ನು ಅನುಸರಿಸಿದ್ದ ಚಿತ್ರತಂಡ ಬಾಹುಬಲಿ ಮೊದಲ ಆವೃತ್ತಿ ವೇಳೆಯಲ್ಲೂ ಚಿತ್ರ ನಾಯಕ, ನಾಯಕಿ ಮತ್ತು ಖಳನಟ ರಾಣಾ ಅವರ  ಜನ್ಮದಿನದಂದು ಚಿತ್ರ ಟ್ರೇಲರ್ ಬಿಡುಗಡೆ ಮಾಡಿತ್ತು.

ಮೂಲಗಳ ಪ್ರಕಾರ ಬಾಹುಬಲಿ-2 ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದ್ದು, ಶೇ.85 ರಷ್ಟು ಚಿತ್ರೀಕರಣ ಈಗಾಗಲೇ ಮುಕ್ತಾಯವಾಗಿದೆ. ಅಕ್ಟೋಬರ್ ಅಂತ್ಯದ ವೇಳೆ ಚಿತ್ರ  ಶೇ.90ರಷ್ಟು ಪೂರ್ಣಗೊಳ್ಳಲ್ಲಿದ್ದು, ಅದೇ ತಿಂಗಳಲ್ಲಿ ನಟ ಪ್ರಭಾಸ್ ಅವರ ಜನ್ಮ ದಿನಾಚರಣೆ ಇದೆ. ಹೀಗಾಗಿ ಚಿತ್ರದ ಮೊದಲ ಅಧಿಕೃತ ಟ್ರೈಲರ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿದೆ.  ಪ್ರಭಾಸ್ ಜನ್ಮ ದಿನದಂದು ರಾಜ ಬಾಹುಬಲಿಯ ಕುರಿತಾದ ಟೀಸರ್ ಮಾತ್ರ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com