ಚಿರಂಜೀವಿ ಜೊತೆಗೆ ನಟಿಸಲು ಕತ್ರಿನಾ ನಿರಾಕರಿಸಿದ್ದರಾ?

ಇತ್ತೀಚಿನ ವದಂತಿಗಳನ್ನು ನಂಬುವುದಾದರೆ, ತೆಲುಗು ಸೂಪರ್ ಸ್ಟಾರ್ ಚಿರಂಜೀವಿ ಎದುರು ನಟಿಸಲು ಕತ್ರಿನಾ ಕೈಫ್ ನಿರಾಕರಿಸಿದ್ದರಂತೆ ಆದುದರಿಂದ ತಮಿಳು ಸೂಪರ್ ಹಿಟ್ ಸಿನೆಮಾ
ಕತ್ರಿನಾ ಕೈಫ್
ಕತ್ರಿನಾ ಕೈಫ್
ನವದೆಹಲಿ: ಇತ್ತೀಚಿನ ವದಂತಿಗಳನ್ನು ನಂಬುವುದಾದರೆ, ತೆಲುಗು ಸೂಪರ್ ಸ್ಟಾರ್ ಚಿರಂಜೀವಿ ಎದುರು ನಟಿಸಲು ಕತ್ರಿನಾ ಕೈಫ್ ನಿರಾಕರಿಸಿದ್ದರಂತೆ ಆದುದರಿಂದ ತಮಿಳು ಸೂಪರ್ ಹಿಟ್ ಸಿನೆಮಾ 'ಕತ್ತಿ'ಯ ತೆಲುಗು ರಿಮೇಕ್ ನಲ್ಲಿ ಚಿರಂಜೀವಿ ಜೊತೆಗೆ ನಟಿಸಲು ಕಾಜಲ್ ಅಗರವಾಲ್ ಅವರನ್ನು ಆಯ್ಕೆ ಮಾಡಲಾಗಿದೆ. ಇದು ಚಿರಂಜೀವಿ ಅವರ 150ನೇ ಚಿತ್ರ. 
ಸ್ಪಾಟ್ಬಾಯ್ ನ ವರದಿಯ ಪ್ರಕಾರ ಸೂಪರ್ ಸ್ಟಾರ್ ಜೊತೆಗೆ ನಟಿಸಲು ಮೊದಲು ಕತ್ರಿನಾ ಅವರನ್ನು ಕೇಳಿಕೊಳ್ಳಲಾಯಿತಂತೆ ಆದರೆ ಅದನ್ನು ನಟಿ ವಿನಯವಾಗಿ ತಿರಸ್ಕರಿಸಿದ್ದಾರೆ. 
ಇನ್ನೂ ಹೆಸರಿಡದ ಈ ತೆಲುಗು ಚಿತ್ರವನ್ನು ವಿ ವಿ ವಿನಾಯಕ್ ನಿರ್ದೇಶಿಸುತ್ತಿದ್ದು, ರಾಮ್ ಚರಣ್ ಇದನ್ನು ನಿರ್ಮಿಸುತ್ತಿದ್ದಾರೆ. 
ಕತ್ರಿನಾ ಸದ್ಯಕ್ಕೆ ನಿತ್ಯಾ ಮೆಹ್ರಾ ಅವರ 'ಬಾರ್ ಬಾರ್ ದೇಖೊ' ಸಿನೆಮಾದಲ್ಲಿ ನಿರತರಾಗಿದ್ದು, ಈ ಸಿನೆಮಾ ಸೆಪ್ಟೆಂಬರ್ 9ಕ್ಕೆ ಬಿಡುಗಡೆಯಾಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com