ನೋಟ್ ಮೇಲೆ ನಿಷೇಧ: ಪ್ರಧಾನಿ ಮೋದಿಯನ್ನು ಕೊಂಡಾಡಿದ ನಟ ಶಾರುಖ್ ಖಾನ್

ರು.500 ಹಾಗೂ ರು.1,000 ನೋಟಿನ ಮೇಲೆ ನಿಷೇಧ ಹೇರುವ ಮೂಲಕ ಕಠಿಣ ನಿರ್ಧಾರ ತೆಗೆದುಕೊಂಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಬಾಲಿವುಡ್ ನಟ ಶಾರುಖ್ ಖಾನ್...
ಬಾಲಿವುಡ್ ನಟ ಶಾರುಖ್ ಖಾನ್
ಬಾಲಿವುಡ್ ನಟ ಶಾರುಖ್ ಖಾನ್

ಮುಂಬೈ: ರು.500 ಹಾಗೂ ರು.1,000 ನೋಟಿನ ಮೇಲೆ ನಿಷೇಧ ಹೇರುವ ಮೂಲಕ ಕಠಿಣ ನಿರ್ಧಾರ ತೆಗೆದುಕೊಂಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಬಾಲಿವುಡ್ ನಟ ಶಾರುಖ್ ಖಾನ್ ಅವರು ಗುರುವಾರ ಕೊಂಡಾಡಿದ್ದಾರೆ.

ಭ್ರಷ್ಟಚಾರ ಹಾಗೂ ಖೋಟಾನೋಟಿನ ವಿರುದ್ಧ ಕೇಂದ್ರದ ಮೋದಿ ಸರ್ಕಾರ ತೆಗೆದುಕೊಂಡಿರುವ ಕಠಿಣ ನಿರ್ಧಾರ ಕುರಿತಂತೆ ಈಗಾಗಲೇ ಬಾಲಿವುಡ್ ವಲಯದಲ್ಲಿ ಸಾಕಷ್ಟು ಮೆಚ್ಚುಗೆಯ ಹೇಳಿಕೆಗಳು ಕೇಳಿ ಬರುತ್ತಿದೆ.

ಟ್ವಿಟರ್ ನಲ್ಲಿ ನಟ ಶಾರುಖ್ ಖಾನ್ ಅವರು ಪ್ರತಿಕ್ರಿಯೆ ನೀಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೋದಿಯವರ ನಿರ್ಧಾರ ಉತ್ತಮವಾದ ಹೆಜ್ಜೆಯಾಗಿದೆ. ದೂರದೃಷ್ಟಿಯುತ ನಿರ್ಧಾರ ಇದಾಗಿದ್ದು, ನಿಜಕ್ಕೂ ಈ ನಿರ್ಧಾರ ಉತ್ತಮವಾಗಿದೆ. ಅಲ್ಲದೆ, ನಿರ್ಧಾರ ರಾಜಕೀಯ ಪ್ರೇರಿತವಾಗಿಲ್ಲ. ನಿರ್ಧಾರದಿಂದ ಭಾರತದ ಆರ್ಥಿಕ ವಲಯದಲ್ಲಿ ಧನಾತ್ಮಕ ಬೆಳವಣಿಗೆ ಕಂಡು ಬರಲಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com