ಸಿಂಗಂ-3 ಚಿತ್ರದಲ್ಲಿ ಬಾಹುಬಲಿ ಪ್ರಭಾಸ್ ಅಭಿನಯಿಸುತ್ತಿಲ್ಲ!

ತಮಿಳಿನ ಸೂಪರ್ ಹಿಟ್ ಸಿಂಗಂ ಸರಣಿಯ ಮೂರನೇ ಆವೃತ್ತಿ ಸಿಂಗಂ-3 ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು ಈ ಮಧ್ಯೆ ಸಿಂಗಂ-3 ಚಿತ್ರದಲ್ಲಿ ಬಾಹುಬಲಿ ಪ್ರಭಾಸ್...
ಪ್ರಭಾಸ್
ಪ್ರಭಾಸ್
Updated on

ಚೆನ್ನೈ: ತಮಿಳಿನ ಸೂಪರ್ ಹಿಟ್ ಸಿಂಗಂ ಸರಣಿಯ ಮೂರನೇ ಆವೃತ್ತಿ ಸಿಂಗಂ-3 ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು ಈ ಮಧ್ಯೆ ಸಿಂಗಂ-3 ಚಿತ್ರದಲ್ಲಿ ಬಾಹುಬಲಿ ಪ್ರಭಾಸ್ ಚಿಕ್ಕ ಪಾತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿಯನ್ನು ನಿರ್ಮಾಪಕರು ತಳ್ಳಿಹಾಕಿದ್ದಾರೆ.

ಸಿಂಗಂ-3 ಚಿತ್ರದಲ್ಲಿ ಪ್ರಭಾಸ್ ಅವರು ಅಭಿನಯಿಸುತ್ತಿಲ್ಲ. ಇದು ಗಾಳಿ ಸುದ್ದಿ ಎಂದು ನಿರ್ಮಾಪಕ ಜ್ಞಾನವೇಲ್ ರಾಜಾ ಅವರು ತಿಳಿಸಿದ್ದಾರೆ.

ಪ್ರಾಮಾಣಿಕ ಮತ್ತು ದಕ್ಷ ಪೊಲೀಸ್ ಅಧಿಕಾರಿ ಯಾಗಿ ಸಿಂಗಂ-3 ಚಿತ್ರದ ಮೂಲಕ ಮತ್ತೆ ಕಾಲಿವುಡ್ ನಟ ಸೂರ್ಯ ತೆರೆಯ ಮೇಲೆ ವಿಜ್ರಂಭಿಸಲಿದ್ದಾರೆ. ಸದ್ಯ ಚಿತ್ರ ತಂಡ ಸೋಮವಾರ ರಾತ್ರಿ 10 ದಿನಗಳ ಶೂಟಿಂಗ್ ಗಾಗಿ ಮಲೇಷ್ಯಾಗೆ ತೆರಳಿದೆ ಎಂದರು.

ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಮತ್ತು ಶೃತಿ ಹಾಸನ್ ಅಭಿನಯದ್ದು ಈ ಚಿತ್ರದಲ್ಲಿ ವಿಲನ್ ಆಗಿ ಠಾಕೂರ್ ಅನೂಪ್ ಸಿಂಗ್ ಅವರನ್ನು ಪರಿಚಯಿಸಲಾಗುತ್ತಿದೆ. ಮೂಲ ತಮಿಳು ಹಾಗೂ ತೆಲುಗು ಆವತರಣಿಕೆಯ ಚಿತ್ರ ದೇಶಾದ್ಯಂತ ಡಿಸೆಂಬರ್ 16ರಂದು ಬಿಡುಗಡೆಯಾಗಲಿದೆ ಎಂದರು ನಿರ್ಮಾಪಕರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com