

ಬೆಂಗಳೂರು: ದೇಶಾದ್ಯಂತ ಬಾಹುಬಲಿ ಚಿತ್ರ ವೀಕ್ಷಣೆಗಾಗಿ ಪ್ರೇಕ್ಷಕರು ಮುಗಿಬಿದ್ದು ಟಿಕೆಟ್ ಖರೀದಿ ಮಾಡುತ್ತಿದ್ದರೆ, ಇತ್ತ ಬೆಂಗಳೂರಿನ ಪ್ರತಿಷ್ಠಿತ ಚಿತ್ರಮಂದಿರವೊಂದು ಬಾಹುಬಲಿ ಚಿತ್ರದ ದ್ವಿತಿಯಾರ್ಧವನ್ನು ಮೊದಲೇ ಪ್ರದರ್ಶನ ಮಾಡಿ ಪ್ರೇಕ್ಷಕರಿಂದ ಪ್ರತಿಭಟನೆ ಎದುರಿಸಿದೆ.
ಬೆಂಗಳೂರಿನ ಪ್ರತಿಷ್ಠಿತ ಪಿವಿಆರ್ ಅರೇನಾ ಮಾಲ್ ನಲ್ಲಿ ಇಂತಹುದೊಂದು ಯಡವಟ್ಟಾಗಿದ್ದು, ನಿನ್ನೆ ರಾತ್ರಿ ನಡೆದ ಶೋನಲ್ಲಿ ಬಾಹುಬಲಿ-2 ಚಿತ್ರದ ಮೊದಲಾರ್ಧಕ್ಕೆ ಬದಲಾಗಿ ದ್ವಿತಿಯಾರ್ಧವನ್ನು ಮೊದಲೇ ಪ್ರದರ್ಶನ ಮಾಡಲಾಗಿದೆ. ವಿಚಿತ್ರವೆಂದರೆ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯ ಬರುವವರೆಗೂ ಪ್ರೇಕ್ಷಕರಿಗೆ ಅದು ದ್ವಿತಿಯಾರ್ಧವೆಂದು ಗೊತ್ತೇ ಆಗಿಲ್ಲವಂತೆ. ಚಿತ್ರಮಂದಿರದಲ್ಲಿ ಕುಳಿತಿದ್ದ ಪ್ರೇಕ್ಷಕರೊಬ್ಬರು ಈ ಬಗ್ಗೆ ಟ್ವೀಟ್ ಮಾಡಿದ್ದು, ಚಿತ್ರದ ಮೊದಲಾರ್ಧದಲ್ಲೇ ಇಂತಹ ಭಾರಿ ಯುದ್ಧ ಸನ್ನಿವೇಶಗಳಿವೆ. ಇನ್ನು ದ್ವಿತಿಯಾರ್ಧದಲ್ಲಿ ಇನ್ನೆಂತಹ ಯುದ್ಧ ಸನ್ನಿವೇಶಗಳಿರಬಹುದು ಎಂದು ತಿಳಿದಿದ್ದೆ. ಆದರೆ ಅದೇ ದ್ವಿತಿಯಾರ್ ವೆಂದು ತಿಳಿದು ಭಾರಿ ನಿರಾಸೆಯಾಯಿತು ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಈ ಬಗ್ಗೆ ತಿಳಿದ ಪ್ರೇಕ್ಷಕರು ಚಿತ್ರಮಂದಿರದಲ್ಲೇ ಪ್ರತಿಭಟನೆ ನಡೆಸಿದ್ದು, ಮತ್ತೆ ಚಿತ್ರವನ್ನು ಮೊದಲಿನಿಂದ ಸಂಪೂರ್ಣವಾಗಿ ತೋರಿಸಬೇಕು ಎಂದು ಆಗ್ರಹಿಸಿದ್ದಾರೆ. ಆದರೆ ಈ ಬಗ್ಗೆ ಚಿತ್ರಮಂದಿರ ಸಿಬ್ಬಂದಿಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಸುಮಾರು 8 ಸಾವಿರ ಸ್ಕ್ರೀನ್ ಗಳಲ್ಲಿ ಏಕಕಾಲಕ್ಕೆ ದೇಶಾದ್ಯಂತ ಬಾಹುಬಲಿ 2 ಚಿತ್ರ ತೆರೆ ಕಂಡಿದ್ದು, ಮೊದಲ ದಿನವೇ 100 ಕೋಟಿ ಗಳಿಸುವ ನಿರೀಕ್ಷೆ ಹುಟ್ಟಿಸಿದೆ. 2015ರಲ್ಲಿ ತೆರೆಕಂಡಿದ್ದ ಬಾಹುಬಲಿ ಚಿತ್ರ ಮೊದಲ ದಿನ ಸುಮಾರು 50 ಕೋಟಿ ರು.ಗಳಿಕೆ ಕಂಡಿತ್ತು.
@Iamtssudhir I was there in the show.. Thought "if u have this much great war sequence in First half how it is going to be in second.."..