ಕನ್ನಡವೂ ಸೇರಿದಂತೆ 10 ಭಾಷೆಗಳಲ್ಲಿ "ಸ್ಪೈಡರ್ ಮ್ಯಾನ್" ಚಿತ್ರದ ಟ್ರೈಲರ್ ರಿಲೀಸ್!

ಖ್ಯಾತ ಹಾಲಿವುಡ್ ನಟ ಟಾಮ್ ಹೊಲ್ಯಾಂಡ್ ಅಭಿನಯದ ಸ್ಪೈಡರ್ ಮ್ಯಾನ್: ಹೋಮ್ ಕಮಿಂಗ್ ಚಿತ್ರದ ಟ್ರೈಲರ್ ಕನ್ನಡ ಭಾಷೆ ಸೇರಿದಂತೆ ಒಟ್ಟು 10 ಭಾರತೀಯ ಭಾಷೆಗಳಲ್ಲಿ ತೆರೆಕಾಣುತ್ತಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಮುಂಬೈ: ಖ್ಯಾತ ಹಾಲಿವುಡ್ ನಟ ಟಾಮ್ ಹೊಲ್ಯಾಂಡ್ ಅಭಿನಯದ ಸ್ಪೈಡರ್ ಮ್ಯಾನ್: ಹೋಮ್ ಕಮಿಂಗ್ ಚಿತ್ರದ ಟ್ರೈಲರ್ ಕನ್ನಡ ಭಾಷೆ ಸೇರಿದಂತೆ ಒಟ್ಟು 10 ಭಾರತೀಯ ಭಾಷೆಗಳಲ್ಲಿ ತೆರೆಕಾಣುತ್ತಿದೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ "ಸ್ಪೈಡರ್ ಮ್ಯಾನ್: ಹೋಮ್ ಕಮಿಂಗ್" ಚಿತ್ರದ ಟ್ರೈಲರ್ ಕನ್ನಡ, ಹಿಂದಿ, ತೆಲುಗು, ತಮಿಳು, ಗುಜರಾತಿ, ಮಲಯಾಳಂ, ಪಂಜಾಬಿ, ಭೋಜ್ ಪುರಿ, ಮರಾಠಿ ಮತ್ತು ಬೆಂಗಾಳಿ ಭಾಷೆಗಳಲ್ಲಿ ತೆರೆಕಾಣುತ್ತಿದೆ ಎಂದು  ತಿಳಿದುಬಂದಿದೆ. ಚಿತ್ರವನ್ನು ಸೋನಿ ಪಿಕ್ಟರ್ಸ್ ಎಂಟರ್ ಟೈನ್ಮೆಂಟ್ ಇಂಡಿಯಾ ಸಂಸ್ಥೆ ಭಾರತದಲ್ಲಿ ವಿತರಣೆ ಮಾಡುತ್ತಿದ್ದು, ಒಟ್ಟು 10 ಭಾಷೆಗಳಲ್ಲಿ ಚಿತ್ರದ ಟ್ರೈಲರ್ ರಿಲೀಸ್ ಆಗಲಿದೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

"ಟ್ರೆಂಡ್ ಸೆಟ್ಟರ್ ಚಿತ್ರಗಳನ್ನು ಪ್ರೇಕ್ಷಕರ ಮುಟ್ಟಿಸಲು ವಿನೂತನ ಪ್ರಯತ್ನ ಮಾಡುತ್ತಿರುವ ಕುರಿತು ಸೋನಿ ಸಂಸ್ಥೆಗೆ ಬಹಳ ಹೆಮ್ಮೆ ಇದೆ. ಸ್ಪೈಡರ್ ಮ್ಯಾನ್ ಚಿತ್ರವನ್ನು ಭಾರತೀಯರು ತಮ್ಮದೇ ಮಾತೃಭಾಷೆಯಲ್ಲಿ ಬರ  ಮಾಡಿಕೊಳ್ಳಲ್ಲಿದ್ದಾರೆ. ಭಾರತೀಯರು ಸದಾಕಾಲ ಹೊಸ ತಂತ್ರಜ್ಞಾನ ಹೊಸ ಪ್ರಯತ್ನಕ್ಕೆ ಬೆಂಬಲ ನೀಡುತ್ತಾರೆ. ಹೀಗಾಗಿ ಸ್ಪೈಡರ್ ಮ್ಯಾನ್ ಚಿತ್ರವನ್ನು ಖಂಡಿತಾ ಅವರು ಇಷ್ಟಪಡುತ್ತಾರೆ. ಸ್ಪೈಡರ್ ಮ್ಯಾನ್ ಸರಣಿ ಈ ಹಿಂದಿನ  ಚಿತ್ರಕ್ಕಿಂತ ಸ್ಪೈಡರ್ ಮ್ಯಾನ್: ಹೋಮ್ ಕಮಿಂಗ್ ಚಿತ್ರ ಬಹುದೊಡ್ಡ ಹಿಟ್ ಚಿತ್ರವಾಗಲಿದೆ ಎಂದು ಸೋನಿ ಪಿಕ್ಟರ್ಸ್ ಎಂಟರ್ ಟೈನ್ಮೆಂಟ್ ಇಂಡಿಯಾ ಸಂಸ್ಥೆಯ ಎಂಡಿ ವಿವೇಕ್ ಕೃಷ್ಣಾನಿ ಹೇಳಿದ್ದಾರೆ.

ಸ್ಪೈಡರ್ ಮ್ಯಾನ್: ಹೋಮ್ ಕಮಿಂಗ್ ಚಿತ್ರದ ಮೂಲಕ ನಟ ಟಾಮ್ ಹೊಲ್ಯಾಂಡ್  ಹಾಲಿವುಡ್ ಗೆ ಪದಾರ್ಪಣೆ ಮಾಡುತ್ತಿದ್ದು, ಈ ಹಿಂದೆ ಕ್ಯಾಪ್ಟನ್ ಅಮೆರಿಕಾ ಚಿತ್ರದಲ್ಲಿ ಇದೇ ಸ್ಪೈಡರ್ ಮ್ಯಾನ್ ವೇಷದಲ್ಲಿ ಹೊಲ್ಯಾಂಡ್ ಪ್ರಮುಖ  ಸಹಾಯಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸ್ಪೈಡರ್ ಮ್ಯಾನ್: ಹೋಮ್ ಕಮಿಂಗ್ ಚಿತ್ರ ಇದೇ ಜುಲೈ 7ರಂದು ಇಂಗ್ಲಿಷ್, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ತೆರೆಕಾಣಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com