ನಂದ ಕಿಶೋರ್ ನಿರ್ದೇಶನದ ಸಿನಿಮಾ ಮೂಲಕ ಕನ್ನಡಕ್ಕೆ ಶೃತಿ ಹಾಸನ್ ಎಂಟ್ರಿ

ಧ್ರುವ ಸರ್ಜಾ ಅಭಿನಯದ ಭರ್ಜರಿ ಸಿನಿಮಾ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ನಂದ ಕಿಶೋರ್ ನಿರ್ದೇಶನದ ಮುಂದಿನ ಸಿನಿಮಾಗಾಗಿ ..
ಶೃತಿ ಹಾಸನ್
ಶೃತಿ ಹಾಸನ್
Updated on
ಬೆಂಗಳೂರು: ಧ್ರುವ ಸರ್ಜಾ ಅಭಿನಯದ ಭರ್ಜರಿ ಸಿನಿಮಾ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ನಂದ ಕಿಶೋರ್ ನಿರ್ದೇಶನದ ಮುಂದಿನ ಸಿನಿಮಾಗಾಗಿ ಸಿದ್ಧತೆ ನಡೆಯುತ್ತಿದೆ. 
ಕಮರ್ಷಿಯಲ್ ಮನರಂಜನಾತ್ಮಕ ಸಿನಿಮಾ ಮಾಡುತ್ತಿರುವ ನಂದ ಕಿಶೋರ್ ಶೂಟಿಂಗ್ ಆರಂಭಕ್ಕೂ ಮುನ್ನ ಯಾವ ಪಾತ್ರಕ್ಕೆ ಯಾವ ಕಲಾವಿದರು ನಟಿಸಬೇಕೆಂಬುದರ ಬಗ್ಗೆ ನಿರ್ಧಿಷ್ಟ ಯೋಜನೆ ಇಟ್ಟುಕೊಂಡಿರುತ್ತಾರೆ.
ನಂದಕಿಶೋರ್ ಪೊಗರು ಸಿನಿಮಾಗಾಗಿ ದಕ್ಷಿಣ ಭಾರತದ ಬೆಡಗಿ ಶೃತಿ ಹಾಸನ್ ಅವರನ್ನು ಆಯ್ಕೆ ಮಾಡಿದ್ದಾರೆ ಎಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿ ಬರುತ್ತಿವೆ. ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತರಾಗಿರುವ ನಂದಕಿಶೋರ್ ತಮ್ಮ ಸಿನಿಮಾಗೆ ಶೃತಿ ಹಾಸನ್ ಕರೆ ತರುವ ಸಲುವಾಗಿ ನಟಿಯ ಜೊತೆ ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶೃತಿ ಕೂಡ ಕಥೆಯನ್ನು ಒಪ್ಪಿದ್ದು, ಹಣಕಾಸಿನ ಮಾತುಕತೆಗಳು ಪೂರ್ಣಗೊಂಡರೇ ಕನ್ನಡ ಸಿನಿಮಾದಲ್ಲಿ ಶೃತಿ ಹಾಸನ್ ನಟಿಸಲಿದ್ದಾರೆ.
ಈಗಾಗಲೇ ಹಲವು ದಕ್ಷಿಣ ಭಾರತೀಯ ಸಿನಿಮಾಗಳ ಜೊತೆ ಶೃತಿ ಬಾಲಿವುಡ್ ನಲ್ಲೂ ನಟಿಸಿದ್ದಾರೆ, ಈ ಹಿಂದೆ ಹಲವು ಕನ್ನಡ ನಿರ್ದೇಶರು ಶೃತಿಯನ್ನು ಸ್ಯಾಂಡಲ್ ವುಡ್ ಗೆ ಕರೆ ತರಲು ಪ್ರಯತ್ನಿಸಿ ವಿಫಲರಾಗಿದ್ದರು. 
ಈಗ ನಂದಕಿಶೋರ್ ನಿರ್ದೇಶನದ ಪೊಗರು ಸಿನಿಮಾದಲ್ಲಿ ಶೃತಿ ಹಾಸನ್   ಧ್ರುವ ಸರ್ಜಾ ಜೊತೆ ಹೇಗೆ ಮ್ಯಾಜಿಕ್ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com