ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ ಅತಿಯಾದ ರೋಮಾನ್ಸ್‌ಗೆ ಅಭಿಮಾನಿಗಳು ಗರಂ!

ಗೀತಾ ಗೋವಿಂದಂ ಚಿತ್ರದಲ್ಲಿ ನಟ ವಿಜಯ್ ದೇವರಕೊಂಡ ಜೊತೆ ಅತಿಯಾದ ರೋಮಾನ್ಸ್ ಮಾಡಿರುವುದಕ್ಕೆ ಅಭಿಮಾನಿಗಳು ರಶ್ಮಿಕಾ ಮಂದಣ್ಣ ವಿರುದ್ಧ ತಿರುಗಿಬಿದ್ದಿದ್ದಾರೆ...
ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ
ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ
ಗೀತಾ ಗೋವಿಂದಂ ಚಿತ್ರದಲ್ಲಿ ನಟ ವಿಜಯ್ ದೇವರಕೊಂಡ ಜೊತೆ ಅತಿಯಾದ ರೋಮಾನ್ಸ್ ಮಾಡಿರುವುದಕ್ಕೆ ಅಭಿಮಾನಿಗಳು ರಶ್ಮಿಕಾ ಮಂದಣ್ಣ ವಿರುದ್ಧ ತಿರುಗಿಬಿದ್ದಿದ್ದಾರೆ. 
ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೇ ಗೀತಾ ಗೋವಿಂದಂ ಚಿತ್ರದ ಪೋಸ್ಟರವೊಂದನ್ನು ಬಿಡುಗಡೆ ಮಾಡಿದ್ದು ಇದೀಗ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಪೋಸ್ಟರ್ ನಲ್ಲಿ ವಿಜಯ್ ದೇವರಕೊಂಡ ಅವರ ಬೆನ್ನಿನ ಮೇಲೆ ರಶ್ಮಿಕಾ ಕುಳಿತುಕೊಂಡಿದ್ದು ಇದಕ್ಕೆ ಅಭಿಮಾನಿಗಳು ಟ್ವೀಟ್ ಮಾಡುವ ಮೂಲಕ ಟ್ರೋಲ್ ಮಾಡುತ್ತಿದ್ದಾರೆ. 
ನಟ ರಕ್ಷಿತ್ ಶೆಟ್ಟಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಇದೀಗ ಬೇರೆ ನಟನ ಜೊತೆ ಅತಿಯಾದ ರೋಮಾನ್ಸ್ ಮಾಡುವುದು ಸರಿನಾ? ಎಂದು ಟ್ವೀಟರಿಗರು ಪ್ರಶ್ನಿಸಿದ್ದಾರೆ. 
ತಮ್ಮನ್ನು ಟ್ರೋಲ್ ಮಾಡುತ್ತಿರುವುದಕ್ಕೆ ಕೋಪಗೊಂಡಿರುವ ರಶ್ಮಿಕಾ ಮಂದಣ್ಣ ಗೀತಾ ಗೋವಿಂದಂ ಚಿತ್ರದಲ್ಲಿ ನಾನು ವಿಜಯ್ ದೇವರಕೊಂಡ ಅವರ ಪತ್ನಿಯಾಗಿ ಅಭಿನಯಿಸಿದ್ದು ಹೀಗಾಗಿ ರೋಮಾನ್ಸ್ ದೃಶ್ಯಗಳು ಇರುವುದು ಸಾಮಾನ್ಯ ಎಂದು ಪ್ರತಿಕ್ರಿಯಿಸಿದ್ದಾರೆ. 
ಇಷ್ಟಕ್ಕೂ ಸುಮ್ಮನಾಗದ ಟ್ರೋಲಿಗರು ರಶ್ಮಿಕಾ ಮಂದಣ್ಣರ ಕಾಲೆಳೆಯುವ ಮೂಲಕ ಟ್ರೋಲ್ ಮಾಡುತ್ತಿದ್ದಾರೆ. 
ಗೀತಾ ಗೋವಿಂದಂ ಚಿತ್ರ ರಶ್ಮಿಕಾ ಮಂದಣ್ಣಗೆ ಒಂದು ಪ್ರಮುಖ ಚಿತ್ರವಾಗಿದೆ. ಕಾರಣ ಈ ಹಿಂದೆ ತಾವು ಅಭಿನಯಿಸಿದ್ದ ಕನ್ನಡದ ಕಿರಿಕ್ ಪಾರ್ಟಿ, ಅಂಜನಿಪುತ್ರ, ಚಮಕ್ ಹಾಗೂ ತೆಲುಗಿನ ಚಲೋ ಚಿತ್ರಗಳಲ್ಲಿ ಇಷ್ಟೊಂದು ರೋಮಾನ್ಸ್ ದೃಶ್ಯಗಳು ಇರಲಿಲ್ಲ. ಆದರೆ ವಿಜಯ್ ದೇವರಕೊಂಡ ಚಿತ್ರದಲ್ಲಿ ಅತಿಯಾದ ರೋಮಾನ್ಸ್ ದೃಶ್ಯಗಳಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com