ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಗಾಯಕಿ ಅಧಿತಿ ಸಾಗರ್‌ಗೆ 'ಧಮ್' ಸಂಕಷ್ಟ!

ಕನ್ನಡದ ರ್ಯಾಪರ್ ಚಂದನ್ ಶೆಟ್ಟಿಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದು ಇದರ ಬೆನ್ನಲ್ಲೇ ಇದೀಗ ಸ್ಯಾಂಡಲ್ವುಡ್ ನ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ಗಾಯಕಿ ಅಧಿತಿ ಸಾಗರ್...
ಅರ್ಜುನ್ ಜನ್ಯ-ಅಧಿತಿ ಸಾಗರ್
ಅರ್ಜುನ್ ಜನ್ಯ-ಅಧಿತಿ ಸಾಗರ್
Updated on: 
ಬೆಂಗಳೂರು: ಕನ್ನಡದ ರ್ಯಾಪರ್ ಚಂದನ್ ಶೆಟ್ಟಿಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದು ಇದರ ಬೆನ್ನಲ್ಲೇ ಇದೀಗ ಸ್ಯಾಂಡಲ್ವುಡ್ ನ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ಗಾಯಕಿ ಅಧಿತಿ ಸಾಗರ್ ಗೆ ಸಂಕಷ್ಟ ಎದುರಾಗಿದೆ. 
ರ್ಯಾಂಬೋ 2 ಚಿತ್ರದಲ್ಲಿನ ಧಮ್ ಮಾರೋ ಧಮ್ ಹಾಡಿನ ಸೃಷ್ಟಿಕರ್ತ ಅರ್ಜುನ್ ಜನ್ಯ ಮತ್ತು ಈ ಹಾಡು ಹಾಡಿದ್ದ ಗಾಯಕಿ ಅಧಿತಿ ಸಾಗರ್ ಗೆ ಸಿಸಿಬಿ ಪೊಲೀಸರು ಸಮನ್ಸ್ ನೀಡಲು ಸಿದ್ಧತೆ ನಡೆಸಿದೆ. 
ಈ ಹಾಡಿನ ಮೂಲಕ ಗಾಂಜಾ ಹೊಡೆಯಲು  ಪ್ರಚೋದನೆ ನೀಡಲಾಗುತ್ತದೆ. ಈ ಹಾಡು ಯುವಜನತೆಗೆ ಗಾಂಜಾ ಸೇವನೆ ಮಾಡಲು ಪ್ರಚೋದನೆ ನೀಡುವ ರೀತಿಯಲ್ಲಿದೆ. ಯುವ ಜನತೆ ಪಾರ್ಟಿ ಹಾಗೂ ಪಬ್ ಗೆ ಹೋದಾಗ ಈ ಹಾಡು ಕೇಳಿ ಗಾಂಜಾಗೆ ಆಕರ್ಷಿತರಾಗಿ ಅದನ್ನು ಸೇವಿಸಲು ಮುಂದಾಗುತ್ತಾರೆ ಎಂಬ ಹಿನ್ನೆಲೆಯಲ್ಲಿ ಸಿಸಿಬಿ ತಂಡ ಇಬ್ಬರಿಗೂ ಸಮನ್ಸ್ ನೀಡಲು ಚಿಂತನೆ ನಡೆಸಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ. 
ಇತ್ತೀಚೆಗಷ್ಟೇ ರ್ಯಾಪರ್ ಚಂದನ್ ಶೆಟ್ಟಿ ಅವರು ಹೊಸದಾಗಿ ರ್ಯಾಪ್ ಸಾಂಗ್ ವೊಂದನ್ನು ಬಿಡುಗಡೆ ಮಾಡಿದ್ದರು. ಈ ಹಾಡಿನಲ್ಲಿ ಭಂಗಿ ಹೊಡೆದು ನಗುತಾ ಇರು ಬಳಸಿದ್ದರು. ಹೀಗಾಗಿ ಸಿಸಿಬಿ ಪೊಲೀಸರು ಚಂದನ್ ಶೆಟ್ಟಿಗೆ ನೋಟೀಸ್ ನೀಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com