ಅಂತೆಯೇ ಯಶ್ ಆಕ್ಷನ್ ಸೀನ್ ಗಳ ಝಲಕ್ ಕೂಡ ಟ್ರೈಲರ್ನಲ್ಲಿದ್ದು, 'ಗ್ಯಾಂಗ್ ಇಟ್ಕೊಂಡು ಬರೋನು ಗ್ಯಾಂಗ್ ಸ್ಟರ್ ಆಗ್ತಾನೆ… ಅವನು ಒಬ್ಬನೇ ಬರ್ತಿದ್ದ, ಆತ ಮಾನ್ ಸ್ಟರ್' ಅನ್ನೋ ಪಂಚಿಂಗ್ ಡೈಲಾಗ್ ಟ್ರೈಲರ್ ನಲ್ಲಿದೆ. ಇದೇ ಡಿಸೆಂಬರ್ 21ರಂದು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲದಲ್ಲಿ ಕೆಜಿಎಫ್ ರಿಲೀಸ್ ಆಗಲಿದೆ.