ಬೆಂಗಳೂರು: ಕ್ರಿಸ್ಮಸ್ ವಾರವನ್ನು ದರ್ಶನ್ ಯಜಮಾನ ಸೆಟ್ ನಲ್ಲಿ ಕಳೆಯಲು ನಿರ್ಧರಿಸಿದ್ದಾರೆ, ವಿ ಹರಿಕೃಷ್ಣ ನಿರ್ದೇಶಿಸಿ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ,
ಹಾಡಿನ ಚಿತ್ರೀಕರಣದಲ್ಲಿ ದರ್ಶನ್ ಭಾಗಿಯಾಗಿದ್ದರು, ಈ ಹಾಡು ಸಿನಿಮಾದ ಕೊನೆಯ ಹಾಡಾಗಿದೆ, ಈ ಸಿನಿಮಾದಲ್ಲಿ ಹಲವು ಹಾಡುಗಳಿಗೆ ದರ್ಶನ್ ಜಬರ್ ದಸ್ತ್ ಡ್ಯಾನ್ಸ್ ಮಾಡಿದ್ದಾರೆ, ಈ ಹಾಡಿಗಾಗಿ ಶಶಿಧರ್ ಉಡುಪ ಇದಕ್ಕಾಗಿ ವಿಶಿಷ್ಟ ಸೆಟ್ ರೂಪಿಸಿದ್ದರು.
ಡ್ಯಾನ್ಸ್ ಮಾಸ್ಟರ್ ಮೋಹನ್ ನೃತ್ಯ ನಿರ್ದೇಶನ ಮಾಡಿದ್ದಾರೆ, ಡಾ.ವಿ, ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ., ನಾಯಕನ ಜೊತೆಗೆ 500 ಮಂದಿ ಡ್ಯಾನ್ಸರ್ ಡ್ಯಾನ್ಸ್ ಮಾಡಿದ್ದಾರೆ.
ರಶ್ಮಿಕಾ ಮಂದಣ್ಣ ಅಭಿನಯಿಸಿರುವ ಈ ಸಿನಿಮಾವನ್ನು ಶೈಲಜಾ ನಾಗ್ ಮತ್ತು ಬಿ. ಸುರೇಶ ನಿರ್ಮಾಣ ಮಾಡಿದ್ದಾರೆ, ಠಾಕೂರ್ ಅನೂಪ್ ಸಿಂಗ್ ಖಳನಾಯಕನಾಗಿ ನಟಿಸಿದ್ದಾರೆ.