ಥಿಯೇಟರ್ ನಲ್ಲಿ ಫಿಲ್ಮ್; ಮೊಬೈಲ್ ನಲ್ಲಿ ಕೆಜಿಎಫ್ ಗೇಮ್: ರಾಕಿ ಭಾಯ್ ಗೆ ಅಭಿಮಾನಿಗಳು ಫಿದಾ!

ಕೆಜಿಎಫ್ ಸಿನಿಮಾ ತೆರೆಗೆ ಅಪ್ಪಳಿಸಿದ ಸಾಕಷ್ಟು ಹವಾ ಸೃಷ್ಟಿಯಾಗಿದೆ. ಇದರ ಬೆನ್ನಲ್ಲೇ ಕೆಜಿಎಫ್ ಎಂಬ ಗೇಮ್ ಕೂಡಾ ಬಿಡುಗಡೆಯಾಗಿದೆ
ಕೆಜಿಎಫ್ ಸಿನಿಮಾ ಸ್ಟಿಲ್
ಕೆಜಿಎಫ್ ಸಿನಿಮಾ ಸ್ಟಿಲ್
Updated on
ಬೆಂಗಳೂರು: ಕೆಜಿಎಫ್ ಸಿನಿಮಾ ತೆರೆಗೆ ಅಪ್ಪಳಿಸಿದ ಸಾಕಷ್ಟು ಹವಾ  ಸೃಷ್ಟಿಯಾಗಿದೆ. ಇದರ ಬೆನ್ನಲ್ಲೇ ಕೆಜಿಎಫ್ ಎಂಬ ಗೇಮ್ ಕೂಡಾ ಬಿಡುಗಡೆಯಾಗಿದೆ. 
ಮೊಬಿ2ಫನ್ ಪ್ರೈವೇಟ್ ಲಿಮಿಟೆಡ್ ಈ ಹೊಸ ಗೇಮ್ ರಿಲೀಸ್ ಆಗಿದೆ. ಚಿತ್ರದಂತೆ ಗೇಮ್‌ ಕೂಡಾ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಯಶ್ ಅಭಿಮಾನಿಗಳು  ಈ ಗೇಮ್ ಗೆ ಫಿದಾ ಆಗಿದ್ದಾರೆ. ಈ ಗೇಮ್ ಈಗ ಭಾರೀ ಪ್ರಮಾಣದಲ್ಲಿ ಡೌನ್‌ ಲೋಡ್ ಕೂಡಾ ಆಗಿದೆ. ಅಷ್ಟೇ ಅಲ್ಲದೆ 4.8 ರೇಟಿಂಗ್ಸ್ ನಲ್ಲಿ 5 ರೇಟಿಂಗ್ ಕೂಡ ಪಡೆದುಕೊಂಡಿದೆ.. 5 ಸಾವಿರ ಮಂಜದಿ ಇದನ್ನು ಡೌನ್ ಲೋಡ್ ಮಾಡಿಕೊಂಡಿದ್ದಾರೆ.
ಗೇಮ್ ನಲ್ಲಿ ಕೆಜಿಎಫ್ ಹೀರೋ ಯಶ್ ಅಲಿಯಾಸ್ ರಾಕಿ ಬಾಯ್ ಕೆಜಿಎಫ್ ಗೋಲ್ಡ್ ಮೈನ್ಸ್ ನಲ್ಲಿ ಸಿಕ್ಕಿಹಾಕಿ ಕೊಳ್ಳುತ್ತಾನೆ. ಅದರಿಂದ ಹೊರಬರುವುದು ಆಟಗಾರರ ಸಾಮರ್ಥ್ಯಕ್ಕೆ ಬಿಟ್ಟದ್ದಾಗಿದೆ.
ಈ ಗೇಮ್ ನಲ್ಲಿ ಸಲಾಂ ರಾಕಿ ಭಾಯ್ ಸಾಂಗ್ ಅನ್ನು ಹಿನ್ನೆಲೆ ಮ್ಯೂಸಿಕ್ ಆಗಿ ಬಳಸಿಕೊಳ್ಳಲಾಗಿದೆ,  ಇದರಲ್ಲಿ 50 ಲೆವೆಲ್ ಗಳಿದ್ದು ಕೆಲವು ತೀರಾ ಕ್ಲಿಷ್ಟವಾಗಿವೆ, ಕೆಜಿಎಫ್ ಅಂಡರ್ ಗ್ರೌಂಡ್ ಸೆಟ್ ಗೆ ಗೇಮ್ ನ ಹೋಲಿಕೆಯಿದೆ ಇದೆ ಎಂದು ಗೇಮ್ ಡೆವಲಪರ್ಸ್ ಅಭಿಪ್ರಾಯ ಪಟ್ಟಿದ್ದಾರೆ.
ಕಷ್ಟದ ಲೆವೆಲ್ ಗಳನ್ನು ಸಾಧಿಸಿ ಮುಂದೆ ಹೋದರೇ ಗೇಮ್ ಅನ್ನು ಅರ್ಥ ಮಾಡಿಕೊಳ್ಳುವುದು ಸುಲಭವಾಗುತ್ತದೆ. ಈ ಗೇಮ್ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ, ಕೆಲವರು ಮೆಚ್ಚಿ ಹೊಗಳಿದರೇ ಕೆಲವರು ಬೈಯ್ದದಿದ್ದಾರೆ, ಮಕ್ಕಳು ಈ ಗೇಮ್ ಆಡಿಕೊಂಡು ಎಷ್ಟು ಹೊತ್ತಾದರೂ ಮೊಬೈಲ್ ವಾಪಸ್ ಕೊಡುತ್ತಿಲ್ಲ. ಎಂದು ಕೆಲಲವು ಪೋಷಕರು ಆರೋಪಿಸಿದ್ದಾರೆ. 
ಎಲ್ಲಾ ಲೆವೆಲ್ ಗಳಿಗೂ ಒಂದೇ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಬದಲು ಕೆಜಿಎಫ್ ನ ಬೇರೆ ಬೆರೆ ಹಾಡುಗಳನ್ನು ಹಾಕಬೇಕಿತ್ತು ಎಂದು ಸಲಹೆ ನೀಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com