ಸಿನಿಮಾ ಸುದ್ದಿ

'ಹೋದೆಯ ದೂರ ಓ ಜೊತೆಗಾರ': ಕಾಶಿನಾಥ್ ಅಗಲಿಕೆಗೆ ಚಿತ್ರರಂಗ ಕಂಬನಿ

'ಹೋದೆಯ ದೂರ ಓ ಜೊತೆಗಾರ': ಕಾಶಿನಾಥ್ ಅಗಲಿಕೆಗೆ ಚಿತ್ರರಂಗ ಕಂಬನಿ
ಕಾಶಿನಾಥ್ (ಸಂಗ್ರಹ ಚಿತ್ರ)
Published On :
ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಹಾಗೂ ನಿರ್ದೇಶಕ ಕಾಶಿನಾಥ್ ಅವರು ನಿಧನ ಹೊಂದಿರುವ ಹಿನ್ನಲೆಯಲ್ಲಿ ಕಾಶೀನಾಥ್ ಅವರ ಅಗಲಿಕೆಗೆ ಸ್ಯಾಂಡಲ್'ವುಡ್ ಗುರುವಾರ ತೀವ್ರ ಸಂತಾಪವನ್ನು ಸೂಚಿಸಿದೆ. 
ತಾನಾಯಿತು ತನ್ನ ಕಾರ್ಯವಾಯಿತು ಎಂದು ಬದುಕಿದ ಸಂಭಾವಿತ ಕಾಶಿನಾಥ್- ನಟ ಜಗ್ಗೇಶ್
ಎಂಥಹ ದುರ್ದೈವ...ಅನುಭವ ಚಿತ್ರಕ್ಕೆ ನನಗೆ ಪಾತ್ರಕೊಡಿಸಲು ನನ್ನ ಗುರುಗಳು, ಛಾಯಾಗ್ರಾಹಕ ಸುಂದರ್'ನಾಥ ಸುವರ್ಣರವರು ಕರೆದುಕೊಂಡು ಹೋಗಿದ್ದರು. ಅವಕಾಶ ಸಿಗಲಿಲ್ಲಾ. ಆದರೆ, ಮುಂದೆ ಅವರ ಜೊತೆ ಮನ್ಮಥ ಚಿತ್ರದಲ್ಲಿ ನಟಿಸಿದ್ದೆ. ಕಾಶಿನಾಥ್ ತುಂಬಾ ಸಾಧು ಸ್ವಭಾವದ ಮನುಷ್ಯ. ಯಾರಿಗೂ ನೋಯಿಸದ ಸ್ನೇಹಜೀವಿ. ಇಷ್ಟು ಬೇಗ ವಿಧಿವಶರಾಗಿರುವುದು ಬಹಳ ನೋವು ತಂದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನವರಸ ನಾಯಕ ಜಗ್ಗೇಶ್ ಅವರು ಸಂತಾಪ ಸೂಚಿಸಿದ್ದಾರೆ. 
ಚೌಕಾ ಚಿತ್ರದಲ್ಲಿ 'ಅಪ್ಪ ಐ ಲವ್ ಯೂ ಪಾ' ಹಾಡಿನಲ್ಲಿ ಕಾಶಿನಾಥ್ ಅವರ ಜೊತೆಗೆ ಅಭಿನಯಿಸಿದ್ದೆ. ಹೀಗಾಗಿ ಅಪ್ಪ ಎನ್ನುವ ಫೀಲಿಂಗ್ ಹಾಗೆಯೇ ಇದೆ, ಕಾಶಿನಾಥ್ ಅವರು ಮಾಡಿದ್ದ ಚಿತ್ರಗಳ ಬಗ್ಗೆ ಪುಸ್ತಕವನ್ನೇ ಬರೆಯಬಹುದು. ಕಾಶಿನಾಥ್ ಅವರಂತಹ ದೊಡ್ಡ ಉಡುಗೊರೆಯನ್ನು ಇಂದು ಕನ್ನಡ ಚಿತ್ರರಂಗ ಕಳೆದುಕೊಂಡಿದೆ ಎಂತು ನಟಿ ಮಾನ್ವಿತಾ ಹರೀಶ್ ಅವರು ಹೇಳಿದ್ದಾರೆ. 
ಸಂಗೀತ ನಿರ್ದೇಶಕ ವಿ.ಮನೋಹರ್ ಅವರು ಮಾತನಾಡಿ, ಕಾಶಿನಾಥ್ ಅವರ ಜೊತೆ ಸಹಾಯಕನಾಗಿ ಕೆಲಸ ಮಾಡಿದ್ದೆ. ಅನುಭವ, ಅನಾಮಿಕ, ಅಜಗಜಾಂತರ ಸಿನಿಮಾಗದಲ್ಲಿ ಕೆಲಸ ಮಾಡಿದ್ದೆ. ನನಗೆ ಅನ್ನ ಹಾಕಿದವರು ಕಾಶಿನಾಥ್. ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ದೇವರಲ್ಲಿ ಪಾರ್ಥಿಸುತ್ತೇನೆಂದು ಹೇಳಿದ್ದಾರೆ. 
ಮಾನವೀಯತೆಯುಳ್ಳ ಮನುಷ್ಯ ಕಾಶಿನಾಥ್. ಕಾಶಿನಾಥ್ ನಿಧನ ಹೊಂದಿದ್ದಾರೆಂಬುದನ್ನು ನಂಬಲು ಸಾಧ್ಯವಾಗುತ್ತು. ಅವರ ಅಗಲಿಕೆ ಬಹಳ ನೋವು ತಂದಿದೆ ಎಂದು ನಟ ಶಿವರಾಜ್ ಕುಮಾರ್ ಅವರು ಹೇಳಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.