ತಾರಕಾಸುರನಿಗೆ ಶಿವಣ್ಣ ಹಿನ್ನೆಲೆ ಗಾಯನ!

: ಪುನೀತ್ ರಾಜ್ ಕುಮಾರ ಅವರಂತೆ ಅವರ ಹಿರಿಯ ಸಹೋದರ ಶಿವರಾಜ್ ಕುಮಾರ್ ‘ರಥಾವರ’ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ‘ತಾರಕಾಸುರ...
ತಾರಕಾಸುರ ಸಿನಿಮಾಗೆ ಶಿವಣ್ಣ ಹಿನ್ನೆಲೆ ಗಾಯನ
ತಾರಕಾಸುರ ಸಿನಿಮಾಗೆ ಶಿವಣ್ಣ ಹಿನ್ನೆಲೆ ಗಾಯನ
Updated on
ಬೆಂಗಳೂರು: ಪುನೀತ್ ರಾಜ್ ಕುಮಾರ ಅವರಂತೆ ಅವರ ಹಿರಿಯ ಸಹೋದರ ಶಿವರಾಜ್ ಕುಮಾರ್ ‘ರಥಾವರ’ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ‘ತಾರಕಾಸುರ’ ಚಿತ್ರದ ಹಾಡೊಂದನ್ನು ಶಿವಣ್ಣ ಹಾಡಿದ್ದಾರೆ. ಈ ಮೂಲಕ ಅವರು ಮತ್ತೆ ಮೈಕ್ ಹಿಡಿದಿದ್ದಾರೆ. 
ಹೊಸ ಪ್ರತಿಭೆ ವೈಭವ್ ಚೊಚ್ಚಲ ಬಾರಿಗೆ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ನಾಯಕಿಯಾಗಿ ಮಾನ್ವಿತಾ ಹರೀಶ್ ನಟಿಸುತ್ತಿದ್ದಾರೆ. ಇದೇ ಚಿತ್ರದ ನಾಯಕನ ಇಂಟ್ರೊಡಕ್ಷನ್ ಗೀತೆಯನ್ನೇ ಶಿವಣ್ಣ ಹಾಡಿರುವುದು. ಈ ಬಗ್ಗೆ ಮಾಹಿತಿ ನೀಡುವ ನಿರ್ದೇಶಕ ಚಂದ್ರಶೇಖರ್, ‘ಇದು ಹೀರೋ ಇಂಟ್ರೊಡಕ್ಷನ್ ಸಾಂಗ್ ಆಗಿದ್ದರೂ, ತುಂಬ ವಿಶೇಷವಾಗಿದೆ. 
ಮಕ್ಕಳಿಗೆ ತುಂಬ ಇಷ್ಟವಾಗುವಂತಹ ಹಾಡು ಇದಾಗಿದೆ. ಅಲ್ಲದೆ, ಹಾಡಿನ ಮೂಲಕವೇ ಸಂದೇಶವೊಂದನ್ನು ಹೇಳಿದ್ದೇವೆ. ಇದಕ್ಕಾಗಿ ಶಿವರಾಜ್​ಕುಮಾರ್ ಬಳಿ ಕೇಳಿಕೊಂಡೆವು. ಟ್ಯೂನ್ ಕೇಳಿದೊಡನೆ, ಖುಷಿಯಿಂದಲೇ ಅವರು ಹಾಡಲು ಒಪ್ಪಿಕೊಂಡರು’ 
ಧರ್ಮ ವಿಶ್ ಸಂಗೀತ ನೀಡಿರುವ ಈ ಹಾಡಿಗೆ ಕವಿರಾಜ್ ಸಾಹಿತ್ಯ ಬರೆದಿದ್ದಾರೆ. ಜುಲೈ 12ರಂದು ಶಿವರಾಜ್​ಕುಮಾರ್ ಬರ್ತ್​ಡೇ. ಆ ದಿನದಂದೇ ಈ ಹಾಡನ್ನು ರಿಲೀಸ್ ಮಾಡಬೇಕೆನ್ನುವ ಉದ್ದೇಶವನ್ನು ಚಿತ್ರತಂಡ ಇಟ್ಟುಕೊಂಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com