ರಿಯಾಲಿಟಿ ಶೋನಲ್ಲಿ ಬಾಲಿವುಡ್ ಹಾಡಿಗೆ ಯಕ್ಷಗಾನ ತಾಳ; ವ್ಯಾಪಕ ಖಂಡನೆ

ಕಳೆದ ವಾರ ಖಾಸಗಿ ಮನರಂಜನಾ ವಾಹಿನಿಯ ರಿಯಾಲಿಟಿ ಶೋವೊಂದರಲ್ಲಿ ...
ರಿಯಾಲಿಟಿ ಶೋದಲ್ಲಿ ನೃತ್ಯ ಮಾಡುತ್ತಿರುವ ಕಲಾವಿದರು
ರಿಯಾಲಿಟಿ ಶೋದಲ್ಲಿ ನೃತ್ಯ ಮಾಡುತ್ತಿರುವ ಕಲಾವಿದರು

ಬೆಂಗಳೂರು: ಕಳೆದ ವಾರ ಖಾಸಗಿ ಮನರಂಜನಾ ವಾಹಿನಿಯ ರಿಯಾಲಿಟಿ ಶೋವೊಂದರಲ್ಲಿ ಸ್ಪರ್ಧಿಗಳು ಬಾಲಿವುಡ್ ಹಾಡಿಗೆ ಯಕ್ಷಗಾನದ ವೇಷ ತೊಟ್ಟು ನೃತ್ಯವನ್ನು ಪ್ರದರ್ಶಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಬಾಲಿವುಡ್ ನ ಖ್ಯಾತ ಹಾಡು ''ಮುಕ್ಕಾಲ..ಮುಕ್ಕಾಬುಲ್ಲಾ'' ಹಾಡಿಗೆ ಯಕ್ಷಗಾನದ ನೃತ್ಯವನ್ನು ಬಳಸಿಕೊಂಡು ಯಕ್ಷಗಾನ ಕಲೆಗೆ ಅವಮಾನ ಮಾಡಲಾಗಿದೆ. ಈ ಬಗ್ಗೆ ವಾಹಿನಿ ಕ್ಷಮೆ ಯಾಚಿಸಬೇಕು ಎಂದು ಕರಾವಳಿಯ ಯಕ್ಷಗಾನ ಪ್ರೇಮಿಗಳು ಮತ್ತು ಕಲಾವಿದರು ಆಗ್ರಹಿಸುತ್ತಿದ್ದಾರೆ.

ಈ ಬಗ್ಗೆ ಕಳೆದೆರಡು ದಿನಗಳಿಂದ ಫೇಸ್ ಬುಕ್, ವಾಟ್ಸಾಪ್ ಮತ್ತು ಟ್ವಿಟರ್ ನಲ್ಲಿ ಅಭಿಮಾನಿಗಳು ವಾಹಿನಿಗೆ, ಕಾರ್ಯಕ್ರಮದ ತೀರ್ಪುಗಾರರು ಮತ್ತು ನಿರೂಪಕರಿಗೆ ಹಿಗ್ಗಾಮುಗ್ಗ ಬೈಯುತ್ತಿದ್ದಾರೆ.

ಯಕ್ಷಗಾನ ಅಭಿಮಾನಿಗಳು ತಮ್ಮ ಫೇಸ್ ಬುಕ್ ಖಾತೆಯಲ್ಲಿ ವಾಹಿನಿಗೆ ಬಹಿರಂಗ ಸವಾಲು ಹಾಕಿದ್ದಾರೆ. ತಪ್ಪು ನಡೆದಿದೆ, ಕರಾವಳಿಯ ಪವಿತ್ರ ಕಲೆಯಾದ ಯಕ್ಷಗಾನಕ್ಕೆ ಅವಮಾನ ಮಾಡಿದ್ದು ಈ ಬಗ್ಗೆ ವಾಹಿನಿ ಸಾರ್ವಜನಿಕ ಕ್ಷಮೆ ಕೇಳುವವರೆಗೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com