ಈ ಹಿಂದೆ ರಕ್ಷಿತ್ ಶೆಟ್ಟಿಯವರಿಗೆ ಟ್ವೀಟ್ ಮಾಡಿದ್ದ ರಮ್ಯಾ ಅವರು, ಅವನೇ ಶ್ರೀಮನ್ನಾರಾಯಣ ಚಿತ್ರದ ಟೀಸರ್ ಚೆನ್ನಾಗಿದೆ. ನೀವು ಕನ್ನಡ ಚಿತ್ರರಂಗದಲ್ಲಿ ಹೊಸತೇನನ್ನೋ ಮಾಡಲು ಹೊರಟಿದ್ದೀರಿ. ನಾನು ಚಿತ್ರರಂಗವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಿಮ್ಮ ಮೇಲೆ ಬಹಳ ಹೆಮ್ಮೆಯಿದೆ. ನಿಮ್ಮ ಕೆಲಸಕ್ಕೆ ಸಂತಸವಿದೆ. ಅವನೇ ಶ್ರೀಮನ್ನಾರಾಯಣ ಚಿತ್ರತಂಡಕ್ಕೆ ಹಾಗೂ ನಿಮಗೆ ಶುಭವಾಗಲಿ ಎಂದು ಹೇಳಿದ್ದರು.