ರೋಹಿತ್ ನಿರ್ಮಾಣದ ಬಕಾಸುರ ಸಿನಿಮಾದಲ್ಲಿ ರವಿಚಂದ್ರನ್ ವಿಲ್ಲನ್!

ಆರ್ ಜೆ ರೋಹಿತ್ ತಮ್ಮ ಹೋಮ್ ಬ್ಯಾನರ್ ನಲ್ಲಿ ನಿರ್ಮಿಸುತ್ತಿರುವ ಬಕಾಸುರ ಸಿನಿಮಾಗೆ ಸ್ಯಾಂಡಲ್ ವುಡ್ ನಿಂದ ಭಾರೀ ಬೆಂಬಲ ದೊರಕುತ್ತಿದೆ. ...
ರೋಹಿತ್ ಮತ್ತು ರವಿಚಂದ್ರನ್
ರೋಹಿತ್ ಮತ್ತು ರವಿಚಂದ್ರನ್
ಬೆಂಗಳೂರು: ಆರ್ ಜೆ ರೋಹಿತ್ ತಮ್ಮ ಹೋಮ್ ಬ್ಯಾನರ್ ನಲ್ಲಿ ನಿರ್ಮಿಸುತ್ತಿರುವ ಬಕಾಸುರ ಸಿನಿಮಾಗೆ ಸ್ಯಾಂಡಲ್ ವುಡ್ ನಿಂದ ಭಾರೀ ಬೆಂಬಲ ದೊರಕುತ್ತಿದೆ. 
ಕರ್ವ ಸಿನಿಮಾ ಖ್ಯಾತಿಯ ನವನೀತ್  ಸಿನಿಮಾ ನಿರ್ದೇಶಿಸುತ್ತಿದ್ದು, ಕ್ರೇಜಿಸ್ಟಾರ್ ರವಿಚಂದ್ರನ್ ನೆಗೆಟಿವ್ ರೋಲ್ ನಲ್ಲಿ ನಟಿಸಿದ್ದಾರೆ, ಇದಕ್ಕೆ ಮತ್ತೊಂದು ಗರಿಯಾಗಿದೆ. ನಟ ಯಶ್ ಸಿನಿಮಾದ ಪ್ರಮೋಷನ್  ಟ್ರೇಲರ್ ಗೆ ಧ್ವನಿ ನೀಡಿದ್ದಾರೆ, ಶ್ರೀಮುರುಳಿ ರಿಲೀಸ್ ಮಾಡಲಿದ್ದಾರೆ.
ಇಡೀ ಟ್ರೇಲರ್ ಗೆ ನಟನೊಬ್ಬ ಧ್ವನಿ ನೀಡಿರುವುದು ಇದೇ ಮೊದಲಾಗಿದೆ, ನಾನು ಈ ಮೊದಲು ಅವರನ್ನೆಲ್ಲಾ ಸಂದರ್ಶನ ಮಾಡಿದ್ದೆವು, ಇಂದು ಅವರೆಲ್ಲಾ ನನ್ನ ಸಿನಿಮಾಗೆ ಬೆಂಬಲ ನೀಡಿದ್ದಾರೆ.
ನನ್ನ ಸಿನಿಮಾದಲ್ಲಿ ಯಶ್ ನಟಿಸಬೇಕೆಂದು ಬಯಸಿದ್ದೆ,  ಅದರಲ್ಲೂ ಅವರ ಕಠಿಣ ಕೆಲಸ ನನಗೆ ತುಂಬಾ ಮೆಚ್ಚುಗೆಯಾಗಿದೆ, ಆದರೆ ಯಶ್ ಯಾವಾಗಲೂ ನನಗೆ ತುಂಬಾ ಸಹಾಯ ಮಾಡುತ್ತಾರೆ, ನನಗೆ ಸ್ಯಾಟ್ ಲೈಟ್ ಹಕ್ಕು ದೊರಕಲು ಅವರೇ ಕಾರಣ ಎಂದು ಹೇಳಿದ್ದಾರೆ.
ಮುಂದೆಯೂ ಇದೇ ರೀತಿ ಬೆಂಬಲ ನೀಡುವುದಾಗಿ ಹೇಳಿದ್ದಾರೆ, ನಾನು ಉತ್ತಮ ಕೆಲಸ ಮಾಡಿದ್ದೇನೆ ಎಂದು ನಮ್ಮ ಪ್ರಾಜೆಕ್ಟ್ ಅನ್ನು ಹೊಗಳಿದ್ದಾರೆ. ಬುಕ್ಕಾಸುರ ಸಿನಿಮಾ ರಿಲೀಸ್ ವೇಳೆ ತಮಗೆ ಮಾಹಿತಿ ನೀಡುವಂತೆ ಯಶ್ ಹೇಳಿದ್ದಾರೆಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com