ತಾಯಿ-ತಂಗಿ ಜೊತೆ ಮದುವೆ ಶಾಪಿಂಗ್ ಆರಂಭಿಸಿದ ದೀಪಿಕಾ ಪಡುಕೋಣೆ!

ಗಾಯಗೊಂಡಿರುವ ಕುತ್ತಿಗೆಗೆ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಮ್ಮ ತಾಯಿ ಹಾಗೂ ಸಹೋದರಿ ಜೊತೆ ಬೆಂಗಳೂರಿನಲ್ಲಿ ಸಮಯ ...
ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ
Updated on
ನವದೆಹಲಿ: ಗಾಯಗೊಂಡಿರುವ ಕುತ್ತಿಗೆಗೆ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಮ್ಮ ತಾಯಿ ಹಾಗೂ ಸಹೋದರಿ ಜೊತೆ ಬೆಂಗಳೂರಿನಲ್ಲಿ ಸಮಯ ಕಳೆಯುತ್ತಿದ್ದಾರೆ.
ಸದ್ಯ ಬೆಂಗಳೂರಿನಲ್ಲಿ ತಮ್ಮ ಸಂಬಂಧಿಕರ ಜೊತೆ ಶಾಪಿಂಗ್ ಮಾಡುತ್ತಿದ್ದಾರೆ. ತಮ್ಮ ತಾಯಿ ಮತ್ತು ತಂಗಿ ಅನಿಶಾ ಪಡುಕೋಣೆ ಜೊತೆ ವಿವಾಹಕ್ಕಾಗಿ ಶಾಪಿಂಗ್ ಆರಂಭಿಸಿದ್ದಾರೆ, ನಗರದ ಹಲವು ಆಭರಣ ಅಂಗಡಿಗಳಲ್ಲಿ ಶಾಪಿಂಗ್ ನಡೆಸುತ್ತಿದ್ದಾರೆ.
ದೀಪಿಕಾ ಮತ್ತು ರಣ್ ವೀರ್ ಸಿಂಗ್ ವಿವಾಹಕ್ಕಾಗಿ ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಈ ವರ್ಷದ ಜನವರಿ ತಿಂಗಳಲ್ಲಿ ದೀಪಿಕಾ ಮತ್ತು ರಣ್ ವೀರ್ ಸಿಂಗ್ ಉಂಗುರ ಬದಲಿಸಿಕೊಂಡು ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ಜನವರಿ 5 ರಂದು ದೀಪಿಕಾ ಹುಟ್ಟುಹಬ್ಬವಿತ್ತು, ಅಂದು ನಿಶ್ಚಿತಾರ್ಥ ನಡೆದಿದೆ ಎನ್ನಲಾಗಿದೆ.
ಇನ್ನೂ ಇತ್ತೀಚಿಗಿನ ಹೊಸ ಗಾಸಿಪ್ ಎಂದರೇ ಮುಂಬಯಿಯಿಂದ ಬೆಂಗಳೂರಿಗೆ ಬಂದಿರುವ ದೀಪಿಕಾ ರಣವೀರ್ ಕುಟುಂಬಸ್ಥರ ಜೊತೆಯೂ ಶಾಪಿಂಗ್ ನಡೆಸಿದ್ದಾರೆ ಎನ್ನಲಾಗಿದೆ. ಎರಡು ಕುಟುಂಬದ ಸದಸ್ಯರು ಡಿನ್ನರ್ ನಲ್ಲಿ ಭಾಗಿಯಾಗಿದ್ದರು. ಇನ್ನೂ ವಿವಾಹದ ದಿನಾಂಕ ಕೂಡ ನಿಗದಿಯಾಗಿದೆ ಎಂದು ಹೇಳಲಾಗುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com