ಶಿವಣ್ಣ ನಟನೆಯ 125ನೇ ಚಿತ್ರದ ಟೈಟಲ್ ಭೈರತಿ ರಣಗಲ್!

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರ 125 ಸಿನಿಮಾಗೆ ಭೈರತಿ ರಣಗಲ್ ಎಂಬ ಶೀರ್ಷಿಕೆ ಫೈನಲ್ ಆಗಿದೆ. ...
ಭೈರತಿ ರಣಗಲ್  ಆಗಿ  ಶಿವರಾಜ್ ಕುಮಾರ್
ಭೈರತಿ ರಣಗಲ್ ಆಗಿ ಶಿವರಾಜ್ ಕುಮಾರ್
Updated on
ಬೆಂಗಳೂರು: ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರ 125 ಸಿನಿಮಾಗೆ ಭೈರತಿ ರಣಗಲ್ ಎಂಬ ಶೀರ್ಷಿಕೆ ಫೈನಲ್ ಆಗಿದೆ. 
ಮುಫ್ತಿ ಸಿನಿಮಾ ನಿರ್ದೇಶಕ ನರ್ತನ್ ಜೊತೆ ಶಿವಣ್ಣ ಮತ್ತೆ ಸಿನಿಮಾ ಮಾಡುತ್ತಿದ್ದಾರೆ. ಶಿವರಾಜ್ ಕುಮಾರ್ ಹೋಮ್ ಬ್ಯಾನರ್ ನಲ್ಲಿ ಇದೇ ಮೊದಲ ಬಾರಿಗೆ ತಮ್ಮ ಸಿನಿಮುತ್ತು ಕ್ರಿಯೇಷನ್ ಮೂಲಕ ಚಿತ್ರ ನಿರ್ಮಾಣವಾಗಲಿದೆ,
ಯಾಕೆಂದರೆ ಭೈರತಿ ರಣಗಲ್ ಎನ್ನುವ ಹೆಸರು "ಮಫ್ತಿ' ಚಿತ್ರದಲ್ಲಿ ಶಿವಣ್ಣ ಪಾತ್ರಧಾರಿಯ ಹೆಸರು. ಮುಖ್ಯವಾಗಿ ಶಿವಣ್ಣ ಅವರಿಗೆ "ಭೈರತಿ ರಣಗಲ್' 125 ನೇ ಚಿತ್ರ. ನಿರ್ದೇಶಕ ನರ್ತನ್ "ಮಫ್ತಿ' ನಂತರ ಮತ್ತೊಂದು ಪಕ್ಕಾ ಕಮರ್ಷಿಯಲ್ ಆ್ಯಕ್ಷನ್ ಸಿನಿಮಾ ಕೈಗೆತ್ತಿಕೊಂಡಿದ್ದು, ಚಿತ್ರದ ಟೈಟಲ್, "ಮಫ್ತಿ' ಚಿತ್ರದಲ್ಲಿನ ಅವರ ಪಾತ್ರದ ಸ್ಪೆಷಾಲಿಟಿಗೆ ತಕ್ಕಂತೆಗೆ ಕಥೆಯನ್ನು ಹೆಣೆಯಲಾಗುತ್ತಿದೆ.
ಸದ್ಯ ಶಿವಣ್ಣ ದ್ವಾರಕೀಶ್ ಚಿತ್ರ ಅವರ 52ನೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ,  ಆನಂದ್ ಹೆಸರಿನ ಈ ಸಿನಿಮಾವನ್ನು ಪಿ.ವಾಸು ನಿರ್ದೇಶಿಸುತ್ತಿದ್ದಾರೆ, ತಮಿಳು ನಿರ್ದೇಶಕ ಲಕ್ಕಿ ಗೋಪಾಲ್ ಜೊತೆ ಎಸ್ ಆರ್ ಕೆ ಸಿನಿಮಾದಲ್ಲಿ ಶಿವಣ್ಣ ಅಭಿನಯಿಸುತ್ತಿದ್ದಾರೆ, ಈ ಎಲ್ಲಾ ಪ್ರಾಜೆಕ್ಟ್ ಗಳು ಮುಗಿದ ನಂತರ ಭೈತಿ ರಣಗಲ್  ಕೈಗೆತ್ತಿಕೊಳ್ಳಲಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com