ಸಾಮಾಜಿಕ ಜಾಲತಾಣಗಳಲ್ಲಿ ಭಾರತೀಯ ಸಿನಿಮಾಗಳ ಟ್ರೈಲರ್ ರಿವ್ಯೂ ಮಾಡುವ ಕೆಲ ವಿದೇಶಿಗರು ಕನ್ನಡದ ಕೆಜಿಎಫ್ ಟ್ರೈಲರ್ ವೀಕ್ಷಿಸಿದ್ದು, ಚಿತ್ರದ ತಾಂತ್ರಿಕ ವಿಭಾಗವೂ ಸೇರಿದಂತೆ ಇಡೀ ಚಿತ್ರತಂಡದ ಪರಿಶ್ರಮಕ್ಕೆ ಶಹಬ್ಬಾಸ್ ನೀಡಿದ್ದಾರೆ. ಅಂತೆಯೇ ಚಿತ್ರದಲ್ಲಿ ನಟ ಯಶ್ ಅಭಿನಯಕ್ಕೆ ಫಿದಾ ಆಗಿರುವ ಅವರು, ಟ್ರೈಲರ್ ನಲ್ಲಿ ನಟ ಯಶ್ ಸುತ್ತಿಗೆಯನ್ನು ಹಿಡಿದು ವಿರೋಧಿಗಳನ್ನು ಚಚ್ಚುವ ದೃಶ್ಯವನ್ನು ಹಾಲಿವುಡ್ ನ ಥಾರ್ ಚಿತ್ರಕ್ಕೆ ಹೋಲಿಕೆ ಮಾಡಿದ್ದಾರೆ.