ಚೆಲುವಿನ ಚಿತ್ತಾರ ನಟಿ ಅಮೂಲ್ಯ ಹುಟ್ಟು ಹಬ್ಬ: ಕುಟುಂಬ, ಅಭಿಮಾನಿಗಳೊಡನೆ ಸಂಭ್ರಮಾಚರಣೆ

ಸ್ಯಾಂಡಲ್ ವುಡ್ ನಲ್ಲಿ "ಚೆಲುವಿನ ಚಿತ್ತಾರ" ದಿಂದಲೇ ಖ್ಯಾತರಾದ ನಟಿ ಅಮೂಲ್ಯಗೆ ಇಂದು (ಶುಕ್ರವಾರ) ಹುಟ್ಟು ಹಬ್ಬದ ಸಂಭ್ರಮ.
ಚೆಲುವಿನ ಚಿತ್ತಾರ ನಟಿ ಅಮೂಲ್ಯ ಹುಟ್ಟು ಹಬ್ಬ: ಕುಟುಂಬ, ಅಭಿಮಾನಿಗಳೊಡನೆ ಸಂಭ್ರಮಾಚರಣೆ
ಚೆಲುವಿನ ಚಿತ್ತಾರ ನಟಿ ಅಮೂಲ್ಯ ಹುಟ್ಟು ಹಬ್ಬ: ಕುಟುಂಬ, ಅಭಿಮಾನಿಗಳೊಡನೆ ಸಂಭ್ರಮಾಚರಣೆ
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ "ಚೆಲುವಿನ ಚಿತ್ತಾರ" ದಿಂದಲೇ ಖ್ಯಾತರಾದ ನಟಿ ಅಮೂಲ್ಯಗೆ ಇಂದು (ಶುಕ್ರವಾರ) ಹುಟ್ಟು ಹಬ್ಬದ ಸಂಭ್ರಮ.
ಕುಟುಂಬ, ಅಭಿಮಾನಿಗಳ ಜತೆ ನಟಿ ತಮ್ಮ ಜನ್ಮ ದಿನವನ್ನು ಆಚರಿಸಿಕೊಂಡಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಅವರ ನಿವಾಸದಲ್ಲಿ ಅಮೂಲ್ಯ, ಪತಿ, ಮನೆಯವರು ಹಾಗೂ ಅಭಿಮಾನಿಗಳ ನಡುವೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.
ಈ ವೇಳೆ ಸಂಭ್ರಮಾಚರಣೆ ಫೋಟೋ ತೆಗೆಸಿಕೊಂಡಿದ್ದ ಅಮೂಲ್ಯ ಅದನ್ನು ತಮ್ಮ ಫೇಸ್ ಬುಕ್ ನಲ್ಲಿ ಅಪ್ ಮಾಡಿದ್ದಾರೆ.
ಇನ್ನು ನಿನ್ನೆ (ಗುರುವಾರ) ಗಣೇಶ ಚತ್ಯ್ರ್ಥಿ ಅಂಗವಾಗಿ ನಟಿ ಮಣ್ಣಿನ ಗಣೇಶನನ್ನು ಮನೆಯಲ್ಲಿ ಪ್ರತಿಷ್ಠೆ ಮಾಡಿ ಪೂಜೆ ನೆರವೇರಿಸಿದ್ದಾರೆ. ಹಬ್ಬಕ್ಕಾಗಿ ತವರಿಗೆ ಆಗಮಿಸಿದ್ದ ನಟಿಗೆ ಅವರ ತಾಯಿ, ಸೋದರ ಹಾಗೂ ಕುಟುಂಬದ ಸ್ನೇಹಿತರು ಮಧ್ಯರಾತ್ರಿಯೇ ಕೇಕ್ ತಂದುಕತ್ತರಿಸುವ ಮೂಲಕ ಶುಭ ಕೋರಿದ್ದರು.
ಇಷ್ಟಲ್ಲದೆ ಪತಿ ಜಗದೀಶ್ ಹಾಗೂ ಅತ್ತೆ, ಮಾವ ಸಹ ಅಮೂಲ್ಯ ಅವರಿಗೆ ಶುಭ ಹಾರೈಸಿದ್ದಾರೆ.
ನಟಿ ಅಮೂಲ್ಯ ಕನ್ನಡದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಮುಗುಳು ನಗೆ’ ಚಿತ್ರದಲ್ಲಿ ಕಡೆಯದಾಗಿ ಕಾಣಿಸಿಕೊಂಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com