ಚಿರಂಜೀವಿ ಸರ್ಜಾ ನಟನೆಯ 'ಸಿಂಘ' ಸಿನಿಮಾಗೆ ಮೇಘನಾ ರಾಜ್ ಹಿನ್ನಲೆ ಗಾಯನ

ಸಿಂಘ ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ, ನಿಜಯ್ ಕಿರಣ್ ನಿರ್ದೇಶನದ ಸಿನಿಮಾ ಚಿರಂಜೀವಿ ಸರ್ಜಾಗೆ ವಿಶೇಷವಾಗಿದೆ, ಏಕೆಂದರೇ ಸಿಂಘಂ ...
ಮೇಘನಾ ರಾಜ್
ಮೇಘನಾ ರಾಜ್
Updated on
ಸಿಂಘ ಸಿನಿಮಾದಲ್ಲಿ  ಚಿರಂಜೀವಿ ಸರ್ಜಾ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ, ನಿಜಯ್ ಕಿರಣ್ ನಿರ್ದೇಶನದ  ಸಿನಿಮಾ ಚಿರಂಜೀವಿ ಸರ್ಜಾಗೆ ವಿಶೇಷವಾಗಿದೆ,  ಏಕೆಂದರೇ ಸಿಂಘಂ ಮೂಲಕ ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ಗಾಯಕಿಯಾಗಲು ಹೊರಟಿದ್ದಾರೆ.
ಡ್ಯೂಯೆಟ್ ಹಾಡಿಗೆ ಮೇಘನ ತಮ್ಮ ಧ್ವನಿ ನೀಡಿದ್ದಾರೆ, ಚಿರಂಜೀವಿ ಮತ್ತು ಅದಿತಿ ಪ್ರಭುದೇವ ನಟನೆಯ ಹಾಡಿಗೆ  ನವೀನ್ ಸಜ್ಜು ಮತ್ತು ಮೇಘನಾ ರಾಜ್ ಗಾಯನವಿದೆ, ಏಪ್ರಿಲ್ 6 ರಂದು ಹಾಡು ಬಿಡುಗಡೆಯಾಗಲಿದೆ,
ಮೊದಲ ಹಾಡು ಶಾನೆ ಟಾಪ್ ಆಗವ್ಳೆ ಎಂಬ ಹಾಡಿಗೆ ಮೇಘನಾ ದನಿಗೂಡಿಸಿದ್ದಾರೆ, ಧರ್ಮ ವಿಶ್ ಸಂಗೀತ ನೀಡಿದ್ದಾರೆ,  ಉದಯ್ ಮೆಹ್ತಾ  ಸಿನಿಮಾ ನಿರ್ಮಾಣ ಮಾಡಿದ್ದಾರೆ,  ಸಿನಿಮಾ ಅಂತಿಮ ಹಂತದ ಶೂಟಿಂಗ್ ನಲ್ಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com