ಚೆನ್ನೈ ಬೀದಿಯಲ್ಲಿ ಹುಚ್ಚನಂತೆ ಅಲೆಯುತ್ತಿದ್ದ ವೆಂಕಟ್ ಕೊನೆಗೂ ಪತ್ತೆ!

ಚೆನ್ನೈನ ಬೀದಿಗಳಲ್ಲಿ 'ಹುಚ್ಚ'ನಂತೆ ಅಲೆಯುತ್ತಿದ್ದ ನಟ ವೆಂಕಟ್, ಕೊನೆಗೂ ಪತ್ತೆಯಾಗಿದ್ದಾರೆ.
ನಟ ಹುಚ್ಚಾ ವೆಂಕಟ್
ನಟ ಹುಚ್ಚಾ ವೆಂಕಟ್
Updated on

ರಾಂಧವ ಚಿತ್ರ ತಂಡದಿಂದ ಹುಚ್ಚಾ ವೆಂಕಟ್ ಪತ್ತೆ, ಉಳಿದುಕೊಳ್ಳಲು ತಾತ್ಕಾಲಿಕ ವ್ಯವಸ್ಥೆ

ಚೆನ್ನೈ: ಚೆನ್ನೈನ ಬೀದಿಗಳಲ್ಲಿ 'ಹುಚ್ಛ'ನಂತೆ ಅಲೆಯುತ್ತಿದ್ದ ನಟ ವೆಂಕಟ್, ಕೊನೆಗೂ ಪತ್ತೆಯಾಗಿದ್ದಾರೆ.

ಹೌದು.. ನಿನ್ನೆಯಷ್ಟೇ ಚೆನ್ನೈ ನ ಬೀದಿಗಳಲ್ಲಿ ಚಪ್ಪಲಿ ಇಲ್ಲದೇ, ಹರಿದು ಹೋದ ಬಟ್ಟೆಗಳನ್ನು ಧರಿಸಿ ಅಲೆದಾಡುತ್ತಿದ್ದ ನಟ ಹುಚ್ಚಾ ವೆಂಕಟ್ ಕುರಿತ ವಿಡಿಯೋ ವೈರಲ್ ಆಗಿತ್ತು. ನಟ ಭುವನ್ ಪೊನ್ನಣ್ಣ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ, ವೆಂಕಟ್ ರನ್ನು ರಕ್ಷಿಸುವಂತೆ ಕೇಳಿದ್ದರು. ಅಲ್ಲದೆ ಅವರು ಚೆನ್ನೈನಲ್ಲಿ ಎಲ್ಲಿದ್ದಾರೆ ಎಂದು ಹುಡುಕಿ ಅವರಿಗೆ ನೆರವಾಗುವಂತೆ ತಮ್ಮ ರಾಂಧವ ಚಿತ್ರತಂಡದ ಸದಸ್ಯರಿಗೆ ಮನವಿ ಮಾಡಿದ್ದರು.

ಇದೀಗ ಭುವನ್ ಮನವಿಯಂತೆ ರಾಂಧವ ಚಿತ್ರತಂಡದ ಸದಸ್ಯರು ಚೆನ್ನೈನ ವಡಪಳ್ಳಿಯಲ್ಲಿ ಹುಚ್ಚಾ ವೆಂಕಟ್ ರನ್ನು ಪತ್ತೆ ಮಾಡಿದ್ದು, ಅಲ್ಲಿಯೇ ಅವರಿಗೆ ತಾತ್ಕಾಲಿಕವಾಗಿ ಉಳಿದುಕೊಳ್ಳಲು ವ್ಯವಸ್ಥೆ ಕೂಡ ಮಾಡಿದ್ದಾರೆ. ಈ ಕುರಿತ ವಿಡಿಯೋವನ್ನು ನಟ ಭುವನ್ ಅವರ ಅಧಿಕೃತ ಫೇಸ್ ಬುಕ್ ಖಾತೆ  'ರಾಂಧವ ಭುವನ್ ಪೊನ್ನಣ್ಣ' ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದೆ.

ಈ ಹಿಂದೆ ಭುವನ್ ಪೊನ್ನಣ್ಣ ಅಭಿನಯದ ರಾಂಧವ ಚಿತ್ರತಂಡ ಇತ್ತೀಚೆಗಷ್ಟೇ ಯುಎಫ್ ಓ ಕ್ಯೂಬ್ ಅಪ್ಲೋಡ್ ವಿಚಾರವಾಗಿ ಚೆನ್ನೈಗೆ ತೆರಳಿತ್ತು. ಚಿತ್ರದ ನಿರ್ದೇಶಕ ಸುನೀಲ್ ಆಚಾರ್ಯ ಅವರು ಕಾರಿನಲ್ಲಿ ಹೋಗುತ್ತಿದ್ದಾಗ ಹುಚ್ಚ ವೆಂಕಟ್ ಅವರು ಈ ರೀತಿ ಕಾಣಿಸಿಕೊಂಡಿದ್ದರು. ಕೂಡಲೇ ಕೆಳಗಿಳಿದು ವೆಂಕಟ್ ರನ್ನು ಮಾತನಾಡಿಸಲು ಮುಂದಾದಾಗ ಯಾವುದೇ ಪ್ರತಿಕ್ರಿಯೆ ನೀಡದೆ ಹೊರಟು ಹೋದರಂತೆ.  ಹೀಗಾಗಿ ಹುಚ್ಚ ವೆಂಕಟ್ ಅವರ ಫೋಟೋ ಮತ್ತು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ವಿಚಾರ ಅವರು ಕುಟುಂಬಕ್ಕೆ ತಿಳಿದು ಅವರು ಚೆನ್ನೈನಿಂದ ವೆಂಕಟ್ ರನ್ನು ಕರೆತರುವ ಪ್ರಯತ್ನ ಮಾಡಲಿ ಎಂದು ಭುವನ್ ಮನವಿ ಮಾಡಿಕೊಂಡಿದ್ದರು.

ಅಲ್ಲದೆ ಹುಚ್ಚಾ ವೆಂಕಟ್ ಎಲ್ಲಿದ್ದಾರೆ ಎಂಬುದನ್ನು ಪತ್ತೆ ಮಾಡುವಂತೆ ಭುವನ್ ಚೆನ್ನೈನಲ್ಲಿರುವ ತಮ್ಮ ಚಿತ್ರತಂಡಕ್ಕೆ ಮನವಿ ಮಾಡಿದ್ದರು.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com