ಒಮ್ಮೆ ಭೇಟಿಯಾಗಿ ಅಪ್ಪಿಕೊಳ್ಳಬೇಕು ಅನಿಸಿದೆ: ಕಿರಿಕ್ ಬೆಡಗಿ ರಶ್ಮಿಕಾಗೆ ಅಭಿಮಾನಿ ಪತ್ರ!

ನಾನೆಂದು ಭೇಟಿಯಾಗುವೆನೋ ಆಗ ನಿಮ್ಮನ್ನು ನಾನು ತಬ್ಬಿಕೊಳ್ಳಬೇಕು ಎನಿಸಿದೆ" ಹೀಗೆಂದು ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣಗೆ ಅಭಿಮಾನಿಯೊಬ್ಬ ಪತ್ರ ಬರೆದಿರುವುದು ಈಗ ವೈರಲ್ ಆಗಿದೆ.
ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ
ಬೆಂಗಳೂರು: "ನಾನೆಂದು  ಭೇಟಿಯಾಗುವೆನೋ ಆಗ ನಿಮ್ಮನ್ನು ನಾನು ತಬ್ಬಿಕೊಳ್ಳಬೇಕು ಎನಿಸಿದೆ" ಹೀಗೆಂದು ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣಗೆ ಅಭಿಮಾನಿಯೊಬ್ಬ ಪತ್ರ ಬರೆದಿರುವುದು ಈಗ ವೈರಲ್ ಆಗಿದೆ.
ಅಂದಹಾಗೆ ಅಮೆರಿಕಾ ರಶ್ಮಿಕಾ ಮಂದಣ್ನ ಫ್ಯಾನ್ ಕ್ಲಬ್ ತನ್ನ ಟ್ವೀಟ್ ನಲ್ಲಿ ಪುಟ್ಟ ಅಭಿಮಾನಿಯ ಈ ಪತ್ರವನ್ನು ಹಂಚಿಕೊಂಡಿದೆ. 
"ರಶ್ಮಿಕಾ ಅವರಿಗೆ ನ್ಯೂಯಾರ್ಕ್ ನ ಪುಟ್ಟ ಅಭಿಮಾನಿಯೊಬ್ಬ ಚಿಕ್ಕ ಪತ್ರವನ್ನು ಬರೆದಿದ್ದಾರೆ.ಆತನಿಗೆ ಇನ್ನೂ 8 ವರ್ಷ. ನೀವು ಅವನ ಮೊದಲ ಕ್ರಶ್ ಆಗಿದ್ದೀರಿ. ಅವನು ನೀವು ಅಭಿನಯಿಸಿದ "ಗೀತ ಗೋವಿಂದಂ" ಚಿತ್ರ ನೋಡಿದ್ದು ಅದರ ಹಾಡುಗಳನ್ನು ವೀಕ್ಷಿಸಿದ್ದಾನೆ. ಅವನಿಗೆ ನಿಮ್ಮನ್ನು ಭೇಟಿಯಾಗಬೇಕು, ಹಾಯ್ ಹೇಳಬೇಕೆಂದು ಭಾರೀ ಆಸೆ ಇದೆ" ಫ್ಯಾನ್ ಕ್ಲಬ್ ರಶ್ಮಿಕಾ ಅವರಿಗೆ ಟ್ಯಾಗ್ ಮಾಡಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com