ನೀನಾಸಂ ಸತೀಶ್ ಬರ್ತಡೇಗೆ ಬಂತು ’ಬ್ರಹ್ಮಚಾರಿ’ ಟೀಸರ್

ಚಂದನವನದ ಪ್ರೇಕ್ಷಕರನ್ನು ’ಡಬಲ್ ಇಂಜಿನ್’ ನಲ್ಲಿ ಸುತ್ತಾಡಿಸಿ, ’ಬಾಂಬೆ ಮಿಠಾಯಿ’ ತಿನಿಸಿದ್ದ ಚಂದ್ರಮೋಹನ್ ನಿರ್ದೇಶನದ ’ಬ್ರಹ್ಮಚಾರಿ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ.
ಬ್ರಹ್ಮಚಾರಿ
ಬ್ರಹ್ಮಚಾರಿ
Updated on
ಬೆಂಗಳೂರು: ಚಂದನವನದ ಪ್ರೇಕ್ಷಕರನ್ನು ’ಡಬಲ್ ಇಂಜಿನ್’ ನಲ್ಲಿ ಸುತ್ತಾಡಿಸಿ, ’ಬಾಂಬೆ ಮಿಠಾಯಿ’ ತಿನಿಸಿದ್ದ ಚಂದ್ರಮೋಹನ್ ನಿರ್ದೇಶನದ ’ಬ್ರಹ್ಮಚಾರಿ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ನೀನಾಸಂ ಸತೀಶ್ ಅಭಿನಯಿಸಿರುವ ಚಿತ್ರದ ಟೀಸರ್ ಅವರ ಜನ್ಮದಿನದಂದೇ ರಿಲೀಸ್ ಆಗಿದ್ದು, ಪ್ರೇಕ್ಷಕರನ್ನು ನಕ್ಕು ನಗಿಸುವ ಎಲ್ಲ ಲಕ್ಷಣಗಳು ದಟ್ಟವಾಗಿವೆ.
’100% ವರ್ಜಿನ್’ ಎಂಬ ಟ್ಯಾಗ್ ಲೈನ್ ಹೊಂದಿರುವುದಲ್ಲದೆ, ಮದುವೆಯಾಗಿಯೂ ಬ್ರಹ್ಮಚಾರಿ ಹೇಗೆ? ಎಂಬ ಕುತೂಹಲವನ್ನು ’ಬ್ರಹ್ಮಚಾರಿ’ ಹುಟ್ಟುಹಾಕಿದೆ. ಟೀಸರ್ ಕೂಡ ರಸವತ್ತಾಗಿದ್ದು, ಪ್ರಸ್ತದ ದಿನ ತನ್ನ ವೀಕ್ ನೆಸ್ ನಿಂದಾಗಿ ಕಂಗೆಡುವ ಗಂಡನಾಗಿ ಸತೀಶ್ ನಟಿಸಿದ್ದಾರೆ. ಈತನ ಮಾನಸಿಕ ಸಮಸ್ಯೆಗೆ ಮದ್ದು ಕೊಡುವ ವೈದ್ಯರಾಗಿ ಹಿರಿಯ ನಟ ದತ್ತಣ್ಣ ಎಂದಿನಂತೆ ಲವಲವಿಕೆಯಿಂದ ಅಭಿನಯಿಸಿದ್ದಾರೆ.
ನೀನಾಸಂ ಸತೀಶ್ ಗೆ ಜೋಡಿಯಾಗಿ ಅದಿತಿ ಪ್ರಭುದೇವ, ಗೆಳೆಯರ ಪಾತ್ರದಲ್ಲಿ ಶಿವರಾಜ್ ಕೆ. ಆರ್. ಪೇಟೆ, ಅಶೋಕ್ ನಟಿಸಿದ್ದಾರೆ. ಉದಯ್ ಜೆ ಮೆಹ್ತಾ ಬಂಡವಾಳ ಹೂಡಿದ್ದು, ಧರ್ಮ ಸಂಗೀತ ಸಂಯೋಜಿಸಿದ್ದಾರೆ. ಸೆಪ್ಟೆಂಬರ್‌ಗೆ ’ಬ್ರಹ್ಮಚಾರಿ’ ಬಿಡುಗಡೆಯಾಗುವುದಾಗಿ ಚಿತ್ರತಂಡ ತಿಳಿಸಿದೆ.
ಕಳೆದ ವರ್ಷ ಸತೀಶ್ ನಟಿಸಿದ್ದ ’ಅಯೋಗ್ಯ’ ಚಿತ್ರ ಸೂಪರ್ ಡೂಪರ್ ಹಿಟ್ ಆಗಿತ್ತು. ಮಹೇಶ್ ನಿರ್ದೇಶನದ ಸಖತ್ ಕಾಮಿಡಿ ಕಿಕ್ ಇದ್ದ ಚಿತ್ರದಲ್ಲಿ ಸತೀಶ್ ಜೋಡಿಯಾಗಿ ರಚಿತಾ ರಾಜ್ ಅಭಿನಯಿಸಿದ್ದರು.
ಈ ವರ್ಷ ಸತೀಶ್ ಕೈಯ್ಯಲ್ಲಿ ನಾಲ್ಕೈದು ಚಿತ್ರಗಳಿವೆಯಂತೆ. ಅಲ್ಲದೆ ಸ್ವತಃ ನಿರ್ದೇಶನಕ್ಕೂ ಇಳಿದಿದ್ದು, ’ಮೈ ನೇಮ್ ಈಸ್ ಸಿದ್ದೇಗೌಡ’ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರಂತೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com