ಕೊರೋನಾ ಗೆದ್ದ ಅಮ್ಮ ಮೊದಲಿಗಿಂತಲೂ ಆರೋಗ್ಯವಾಗಿದ್ದಾರೆ: ನೆನಪಿರಲಿ ಪ್ರೇಮ್

ಕೊರೋನಾ ಗೆದ್ದ ಅಮ್ಮ ಮೊದಲಿಗಿಂತಲೂ ಆರೋಗ್ಯವಾಗಿದ್ದಾರೆ: ನೆನಪಿರಲಿ ಪ್ರೇಮ್

ಕೊರೋನಾವನ್ನು ಗೆದ್ದ ಅಮ್ಮ ಮೊದಲಿಗಿಂತಲೂ ಆರೋಗ್ಯವಾಗಿದ್ದಾರೆ ಎಂದು ನೆನಪಿರಲಿ ಪ್ರೇಮ್ ತಮ್ಮ ಸಂತಸ ಹಂಚಿಕೊಂಡಿದ್ದಾರೆ. 

ಕೊರೋನಾವನ್ನು ಗೆದ್ದ ಅಮ್ಮ ಮೊದಲಿಗಿಂತಲೂ ಆರೋಗ್ಯವಾಗಿದ್ದಾರೆ ಎಂದು ನೆನಪಿರಲಿ ಪ್ರೇಮ್ ತಮ್ಮ ಸಂತಸ ಹಂಚಿಕೊಂಡಿದ್ದಾರೆ. 

ಕೊರೋನಾದಿಂದ ನನ್ನ ತಾಯಿ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದಿರುವ ನಟ ಈ ಕುರಿತಂತೆ ತಮ್ಮ ಸಂತಸವನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಕೊರೋನಾ ಸೋಂಕಿಗೆ ತುತ್ತಾಗಿದ್ದ ನನ್ನ ತಾಯಿ 14 ದಿನಗಳ ಕಾಲ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿದಿದ್ದರು. ನನ್ನ ತಾಯಿಗೆ ಬಿಪಿ, ಷುಗರ್ ಸಹ ಇತ್ತು. ಆದರೆ ಅವರು ಆತ್ಮಸ್ಥೈರ್ಯದಿಂದ ಕೊರೋನಾವನ್ನು ಎದುರಿಸಿದ್ದಾರೆ. ಇದೀಗ ಅವರಿಗೆ ಕೊರೋನಾ ನೆಗೆಟಿವ್ ಬಂದಿದೆ. ಮೊದಲಿಗಿಂತಲೂ ಆರೋಗ್ಯವಾಗಿ ಮನೆಗೆ ಮರಳಿದ್ದಾರೆ. 

ಆಸ್ಪತ್ರೆಯಲ್ಲಿ ನನ್ನ ತಾಯಿಗೆ ಚಿಕಿತ್ಸೆ ನೀಡಿದ ವೈದ್ಯರು ಹಾಗೂ ನನ್ನ ತಾಯಿಯ ಆರೋಗ್ಯಕ್ಕಾಗಿ ಹಾರೈಸಿದ ಅಭಿಮಾನಿಗಳಿಗೆ ನನ್ನ ಧನ್ಯವಾದಗಳು ಎಂದು ನಟ ವೀಡಿಯೋ ಸಂದೇಶದ ಮೂಲಕ ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com