ನವಂಬರ್ 20 ರಂದು ಮನ್ಸೋರೆ 'ಆಕ್ಟ್-1978' ಮಲ್ಟಿಪೆಕ್ಸ್ ನಲ್ಲಿ ಬಿಡುಗಡೆ

ನಿರ್ದೇಶಕ ಮನ್ಸೋರೆ (ಮಂಜುನಾಥ ಸೋಮಶೇಖರ ರೆಡ್ಡಿ) ಅವರ ಆಕ್ಟ್ 1978 ಕೊರೋನಾ ಹಿನ್ನೆಲೆಯಲ್ಲಿ ಜಾರಿಗೆ ಬಂದಿರುವ ಹೊಸ ನಿಯಮಗಳ ಅಡಿಯಲ್ಲಿ ಬಿಡುಗಡೆಯಾಗಲಿರುವ ಮೊದಲ ಚಿತ್ರವಾಗಲಿದೆ.
ಮನ್ಸೋರೆ ಆಕ್ಟ್-1978 ನ.20 ರಂದು ಮಲ್ಟಿಪೆಕ್ಸ್ ನಲ್ಲಿ ಬಿಡುಗಡೆ
ಮನ್ಸೋರೆ ಆಕ್ಟ್-1978 ನ.20 ರಂದು ಮಲ್ಟಿಪೆಕ್ಸ್ ನಲ್ಲಿ ಬಿಡುಗಡೆ
Updated on

ನಿರ್ದೇಶಕ ಮನ್ಸೋರೆ (ಮಂಜುನಾಥ ಸೋಮಶೇಖರ ರೆಡ್ಡಿ) ಅವರ ಆಕ್ಟ್ 1978 ಕೊರೋನಾ ಹಿನ್ನೆಲೆಯಲ್ಲಿ ಜಾರಿಗೆ ಬಂದಿರುವ ಹೊಸ ನಿಯಮಗಳ ಅಡಿಯಲ್ಲಿ ಬಿಡುಗಡೆಯಾಗಲಿರುವ ಮೊದಲ ಚಿತ್ರವಾಗಲಿದೆ.

ಅಕ್ಟೋಬರ್ 16 ರಿಂದ ಥಿಯೇಟರ್ ಗಳನ್ನು ತೆರೆಯುವುದಕ್ಕೆ ಸರ್ಕಾರ ಅನುಮತಿ ನೀಡಿದ ಬಳಿಕ ಚಿತ್ರಗಳು ಸರಣಿ ಮರು ಬಿಡುಗಡೆಯಾಗಿದ್ದವು. ಈ ಬಳಿಕ ಹೊಸದಾಗಿ ಆಕ್ಟ್ 1978 ಚಿತ್ರ ಬಿಡುಗಡೆಯಾಗುತ್ತಿದೆ.

ದೀಪಾವಳಿ ನಂತರ ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದ ಮನ್ಸೋರೆ ನ.20 ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.

ಕೊರೋನಾ ಸಾಂಕ್ರಾಮಿಕದಿಂದ ನಲುಗಿರುವ ಸಿನಿಮಾ ರಂಗಕ್ಕೆ ಮನ್ಸೋರೆ ಅವರ ಸಿನಿಮ ಹೊಸ ಆಶಾಕಿರಣವಾಗಿದ್ದು ಸಿನಿಮಾದ ಯಶಸ್ಸು ಲಾಕ್ ಡೌನ್ ನಿಂದ ಎದುರಾಗಿರುವ ಅಸ್ಥಿರತೆಯನ್ನು ನೀಗಿಸಲು ಸಹಕಾರಿಯಾಗಿರಲಿದೆ.

ಯು ಪ್ರಮಾಣಪತ್ರಪಡೆದಿರುವ ಸಾಮಾಜಿಕ ಕಥನ ಹೊಂದಿರುವ ಚಿತ್ರದ ವಿತರಣೆಯನ್ನು ಕೆಆರ್ ಜಿ ಸ್ಟೂಡಿಯೋ ವಹಿಸಿಕೊಂಡಿದ್ದು ಮಲ್ಟಿಪ್ಲೆಕ್ಸ್ ಗಳಲ್ಲಿ ತೆರೆ ಕಾಣಲು ಸಿದ್ಧವಾಗಿದೆ.

ಟ್ರೈಲರ್ ಪಿಆರ್ ಕೆ ಯುಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದ್ದು, ನಿರೀಕ್ಷೆಗಳನ್ನು ಗರಿಗೆದರಿಸಿದೆ.

ಸಿನಿಮಾದಲ್ಲಿ ಒಂದು ಹಾಡಿದ್ದು, ಹಿನ್ನೆಲೆ ಸಂಗೀತವನ್ನು ರಾಹುಲ್ ಶಿವಶಂಕರ್ ಹಾಗೂ ರೊನಾಡಾ ಬಕೇಶ್ ನೀಡಿದ್ದರೆ, ಜಯಂತ್ ಕಾಯ್ಕಿಣಿ ಸಾಹಿತ್ಯವಿದೆ. ಯಜ್ನಾಶೆಟ್ಟಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇವರ ಜೊತೆ ಪ್ರೊಮೋದ್ ಶೆಟ್ಟಿ, ಬಿ ಶೆಟ್ಟಿ, ಬಿ ಸುರೇಶ, ಶೃತಿ, ಅಚ್ಯುತ್ ಕುಮಾರ್ ಸೇರಿದಂತೆ 28 ಕಲಾವಿದರು ನಟಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com